ಬೇಲೂರು :ತಾಲೂಕಿನ ಹಳೇಬಿಡು ಹೋಬಳಿ ಐದಳ್ಳ ಕಾವಲು ಸರ್ವೇ ನಂಬರ್ ಒಂದರಲ್ಲಿ 2555 ಎಕ್ಕರೆ ಸರ್ಕಾರಿ ಭೂಮಿಗಾಗಿ ಈಗಾಗಲೇ 875 ಫಲಾನುಭವಿಗಳು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಸರ್ಕಾರ ಶೀಘ್ರವೇ ಫಲಾನುಭವಿಗಳಿಗೆ ಸರ್ಕಾರಿ ಭೂಮಿಯನ್ನು ಮಂಜೂರಾತಿ ಮಾಡುವ ಮೂಲಕ ಸೂಕ್ತ ದಾಖಲಾತಿ ನೀಡಬೇಕು ಇಲ್ಲವಾದರೆ ಬೇಲೂರಿನಲ್ಲಿ ಪಟ್ಟಣದ ಹಾಸನ -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಡೆದು ಉಗ್ರ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ರೈತ ಸಂಘದ ರಾಷ್ಟ್ರೀಯ ಉಸ್ತುವಾರಿ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಳೇಬೀಡು ಹೋಬಳಿ ಐದಳ್ಳ ಕಾವಲು ಸರ್ವೆ1 ರಲ್ಲಿ 2555 ರ ಭೂಮಿಯಲ್ಲಿ ಈ ಹಿಂದೆ 875 ಮಂದಿ ಭೂರಹಿತರು ಭೂಮಿಯನ್ನು ಉಳುಮೆ ಮಾಡಿಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿ ಈ ಭೂಮಿ ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ಭೂರಹಿತ ರೈತರನ್ನು ಒಕ್ಕಲ್ಬಿಸುವ ಹುನ್ನಾರ ನಡೆಸಿದ ಸಂದರ್ಭದಲ್ಲಿ ಪ್ರೋ.ನಂಜುAಡಸ್ವಾಮಿ ನೇತೃತ್ವದಲ್ಲಿ ಸ್ಥಾಪಿಸಿದ ರಾಷ್ಟ್ರೀಯ ರೈತ ಸಂಘ ಐದಳ್ಳ ಕಾವಲಿನ ಭೂಮಿಗೆ ತೆರಳಿ ಭೂರಹಿತ ರೈತರಿಗೆ ಧೈರ್ಯವನ್ನು ತುಂಬಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಿ ಈಗಾಗಲೇ ಅಲ್ಲಿಂದ ಗಡಿಪಾರು ಮಾಡಲಾಗಿದೆ.
ಆದರೂ ಅರಣ್ಯ ಅಧಿಕಾರಿಗಳು ಇಂದಿಗೂ ಕೂಡ ಈ ಭೂಮಿ ನಮ್ಮದು ಎನ್ನುತ್ತಾರೆ ಆದರೆ ಪಹಣಿ ಇಂದಿಗೂ ಕೂಡ ಸರ್ಕಾರಿ ಭೂಮಿ ಎಂದು ಬರುತ್ತಿದೆ ಸುಪ್ರೀಂಕೋರ್ಟ್ ಮತ್ತು ಕೆಲ ರಾಜ್ಯ ನ್ಯಾಯಾಲಯಗಳು ಕೂಡ ಸರ್ಕಾರಿ ಭೂಮಿಯನ್ನು ರೈತರಿಗೆ ನೀಡಬೇಕು ಎಂದು ಆದೇಶವನ್ನು ನೀಡಿದ್ದಾರೆ. ಕಳೆದ ಮೂರು ದಿನದ ಹಿಂದೆ ಹಾಸನದ ಮಾಜಿ ಸಚಿವರಾದ ಬಿ ಶಿವರಾಂ ರವರು ಕೂಡ ಸರ್ಕಾರಿ ಭೂಮಿಯನ್ನು ರೈತರಿಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದಾರೆ ಅವರು ಸರ್ಕಾರವನ್ನು ಕೂಡ ಪ್ರಶ್ನೆ ಮಾಡಿದ್ದಾರೆ ಇದರಿಂದ ನಮಗೆ ಶಕ್ತಿ ಬಂದಿದೆ ಎಂದು ತಿಳಿಸಿದರು.
ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಭೂಮಿಯನ್ನು ರೈತರಿಗಾಗಿ ಉಳಿಸಬೇಕು ಎಂದು ರಾಷ್ಟ್ರೀಯ ರೈತ ಸಂಘ ಈಗಾಗಲೇ ಆರು ಬಾರಿ ಪಾದಯಾತ್ರೆಯ ಮೂಲಕ ದೆಹಲಿಯ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗಲ್ಲದೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕಲೇಶಪುರದ ಉಪ ವಿಭಾಗಾಧಿಕಾರಿಗಳು ಬೇಲೂರು ತಹಸೀಲ್ದಾರ್ ಅವರಿಗೆ ಹತ್ತಾರು ಭಾರಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ, ಅಧಿಕಾರಿಗಳು ಭೂರಹಿತರಿಗೆ ಭೂಮಿ ನೀಡಲು ಸರ್ಕಾರ ನಾಟಕ ಮಾಡುತ್ತಿದ್ದಾರೆ. ನಾವುಗಳು ಯಾವ ಕಾರಣಕ್ಕೂ ಭೂಮಿಯನ್ನು ಉಳಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಆಯುಭ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಏಜಾಜ್ ಪಾಷ, ಮಹಿಳಾ ಅಧ್ಯಕ್ಷೆ ನಂಜಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ದಸ್ತುಗರಿ, ರೈತ ಮುಖಂಡ ಅಬ್ದುಲ್ ಕುಂಜಿ ಹಾಜರಿದ್ದರು.










