ಸಕಲೇಶಪುರ ತಾಲ್ಲೂಕು ಕುನಿಗನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ತಾರಾ ಮಹೇಶ್ ಅವಿರೋಧ ಆಯ್ಕೆ

B.E. Tara Mahesh of Vadur village was elected unopposed as the new president of Kuniganahalli Gram Panchayat with the support of members of three parties - JDS, Congress and BJP.

ಸಕಲೇಶಪುರ: ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್‌, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳ ಸದಸ್ಯರ ಬೆಂಬಲದಿಂದ ವಡೂರು ಗ್ರಾಮದ ಬಿ.ಇ. ತಾರಾ ಮಹೇಶ್‌ ಅವಿರೋಧವಾಗಿ ಆಯ್ಕೆಗೊಂಡರು.

ಹಿಂದೆ ಅಧ್ಯಕ್ಷರಾಗಿದ್ದ ರವಿಕುಮಾರ್ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ
ಗಂಗಾಧರ್ ಚುನಾವಣಾ ಅಧಿಕಾರಿಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಇ. ತಾರಾ ಮಹೇಶ್‌ ಒಬ್ಬರೇ ನಾಮಪತ್ರ ಸಲ್ಲಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷೆ ಶಶಿಕಲಾ ದಯಾನಂದ್‌, ಸದಸ್ಯರಾದ ಶಿಲ್ಪಾ
ಜಗದೀಶ್‌, ಕೆ.ಎಸ್‌. ಪ್ರಕಾಶ್‌, ಎಂ.ಸಿ. ಸಂಗಪ್ಪ, ರವಿಕುಮಾರ್, ವಡೂರು, ದೀಣೇಕೆರೆ,
ಕಿರುಹುಣುಸೆ, ನೀಚನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು, ಅಧ್ಯಕ್ಷರ ಕುಟುಂಬದವರ ಹಾಗೂ ಇತರರಿದ್ದರು