1.4 C
Munich
Home ಜಿಲ್ಲೆ ಹಾಸನ : ಚೆನ್ನೈನಲ್ಲಿ ನಡೆದ ಸೌತ್ ಏಷ್ಯಾ ಕರಾಟೆ ಪಂದ್ಯಾವಳಿಯಲ್ಲಿ ಹಾಸನದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಹಾಸನ : ಚೆನ್ನೈನಲ್ಲಿ ನಡೆದ ಸೌತ್ ಏಷ್ಯಾ ಕರಾಟೆ ಪಂದ್ಯಾವಳಿಯಲ್ಲಿ ಹಾಸನದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಹಾಸನ: ಚೆನ್ನೈನಲ್ಲಿ ಅಕ್ಟೋಬರ್ 5ರಂದು ನಡೆದ ಸೌತ್ ಏಷ್ಯಾ ಕರಾಟೆ ಚಾಂಪಿಯನ್‌ಷಿಪ್–2025 ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಹಾಸನ ಜಿಲ್ಲೆಯ ಕ್ರೀಡಾಪಟುಗಳು ಶ್ರೇಷ್ಠ ಸಾಧನೆ ತೋರಿದ್ದಾರೆ.

ಕರ್ನಾಟಕ ಕರಾಟೆ ಸಂಘದ ಹಾಸನ ಜಿಲ್ಲಾ ಅಧ್ಯಕ್ಷ ಮಹಮದ್ ಆರಿಫ್  ನಾಯಕತ್ವದಲ್ಲಿ ಭಾಗವಹಿಸಿದ್ದ ಹಾಸನ ತಂಡವು ಕಥಾ ಮತ್ತು ಕುಮಟೇ ವಿಭಾಗಗಳಲ್ಲಿ ಅನೇಕ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.

ಪ್ರಥಮ ಸ್ಥಾನ ಪಡೆದವರು:

  • ಸೈಯದ್ ಶೈಯಾನ್

ಕುಮಟೇ ವಿಭಾಗದಲ್ಲಿ ಜಯ ಸಾಧಿಸಿದವರು:

  • ಸೈಯದ್ ಅರ್ಹಾನ್
  • ಫಿರ್ದೋಸ್
  • ಸೈಯದಾ ಅಲೀನಾ

ದ್ವಿತೀಯ ಸ್ಥಾನ ಪಡೆದವರು:

  • ಮೆಹೆರಾಜ್
  • ಸೂಫಿಯಾನ್
  • ಶಮಂತ್
  • ತನಿಶ್
  • ಅಬ್ದುಲ್ ಗಫಾರ್

ಇವರು ಭರ್ಜರಿ ಪ್ರದರ್ಶನ ನೀಡಿ ಕರ್ನಾಟಕದ ಗೌರವ ಹೆಚ್ಚಿಸಿದ್ದಾರೆ.

ಪಂದ್ಯದಲ್ಲಿ ವಿಜಯ ಸಾಧಿಸಿದ ಬಳಿಕ ಕ್ರೀಡಾಪಟುಗಳು ಕರ್ನಾಟಕ ರತ್ನ ಅಪ್ಪು ಸರ್ ಅವರ ಸ್ಮರಣಾರ್ಥವಾಗಿ ಕರ್ನಾಟಕ ಬಾವುಟವನ್ನು ಹಿಡಿದು “ಜೈ ಕರ್ನಾಟಕ” ಘೋಷಣೆ ನೀಡಿ ತಮ್ಮ ಜಯವನ್ನು ರಾಜ್ಯಕ್ಕೆ ಅರ್ಪಿಸಿದರು.

ಈ ಸಂದರ್ಭದಲ್ಲಿ ತಂಡದ ಮ್ಯಾನೇಜರ್ ಜಮೀರ್, ವಿದ್ಯಾರ್ಥಿಗಳ ಪೋಷಕರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

error: Content is protected !!