5.7 C
Munich
Home News ಹಾಸನದಲ್ಲಿ ರಸ್ತೆ–ವೃತ್ತಗಳಿಗೆ ಜಿಲ್ಲೆಯಲ್ಲಿ ಹುಟ್ಟಿದ ಸಾಧಕರ ಹೆಸರಿಡಿ

ಹಾಸನದಲ್ಲಿ ರಸ್ತೆ–ವೃತ್ತಗಳಿಗೆ ಜಿಲ್ಲೆಯಲ್ಲಿ ಹುಟ್ಟಿದ ಸಾಧಕರ ಹೆಸರಿಡಿ

At the same time, in addition to the dignitaries named in the municipal announcement, the names of many notables in the district should also be considered.

ಹಾಸನ: ನಗರ ಪಾಲಿಕೆಯು ನಗರ ವ್ಯಾಪ್ತಿಯ ಹಲವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಸಂಗೊಳ್ಳಿ ರಾಯಣ್ಣ, ಡಾ.ಎ.ಸಿ. ಮುನಿವೆಂಕಟೇಗೌಡ ಸೇರಿದಂತೆ ವಿವಿಧ ಗಣ್ಯರ ಹೆಸರು ನಾಮಕರಣ ಮಾಡಲು ಪ್ರಕಟಣೆ ಹೊರಡಿಸಿರುವುದನ್ನು ಸ್ವಾಗತಿಸಿರುವ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಹಾಗೆಯೇ ಜಿಲ್ಲೆಯಲ್ಲಿ ಹುಟ್ಟಿ, ಮೇರು ಸಾಧನೆ ಮಾಡಿರುವವರರ ಹೆಸರುಗಳನ್ನೂ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ಇಡಲು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಸಂಚಾಲಕ ಕೃಷ್ಣದಾಸ್ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರಸಭೆ, ನಗರ ಪಾಲಿಕೆಯಾಗಿರುವುದರಿಂದ ವ್ಯಾಪ್ತಿ ಹಿಗ್ಗಿದೆ, ಪರಿಣಾಮ ಸಾರ್ವಜನಿಕ, ಮೂಲಭೂತ ಸೌಕರ್ಯ ಅಭಿವೃದ್ಧಿ, ರಸ್ತೆ, ನೀರು, ಕಸ ವಿಲೇವಾರಿ ಕಾರ್ಯ, ನಗರ ಯೋಜನೆ, ಪರಿಸರ ಸುಂದರೀಕರಣ ಮತ್ತಿತರ ಪ್ರಮುಖ ಕಾಮಗಾರಿಗಳ ಅಗತ್ಯ ತೀವ್ರಗೊಳ್ಳುತ್ತಿದೆ. ಇದಕ್ಕೆ ಪೂರಕವಾದ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಪಾಲಿಕೆ ಪ್ರಕಟಣೆಯಲ್ಲಿ ಹೆಸರಿಸಿರುವ ಗಣ್ಯರ ಜೊತೆಗೆ ಜಿಲ್ಲೆಯ ಅನೇಕ ಮಹನೀಯರ ಹೆಸರುಗಳನ್ನೂ ಪರಿಗಣಿಸಬೇಕು. ಜಿಲ್ಲೆಯಲ್ಲಿ ಜನ್ಮತಾಳಿದ ಅನೇಕರು, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಸಾಮಾಜಿಕ ಕ್ಷೇತ್ರಗಳ ದಿಗ್ಗಜರು ರಾಜ್ಯ ಮತ್ತು ದೇಶಕ್ಕೆ ತಮ್ಮದೇ ಶಾಶ್ವತ ಕೊಡುಗೆ ನೀಡಿದ್ದಾರೆ

ಅವರಲ್ಲಿ ಜಾನಪದ ಹಾಗೂ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕಥೆ, ಕಾದಂಬರಿ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ ಅನಕೃ, ಗಂಭೀರ ಚಿಂತನೆಯ ಲೇಖಕ ಎಸ್.ವಿ. ರಂಗಣ್ಣ, ಜಾನಪದ ತಜ್ಞ ಡಾ. ಎಸ್.ಕೆ.ಕರೀಂ ಖಾನ್, ಕಿ.ರಂ.ನಾಗರಾಜ್, ಕನ್ನಡದ ಮೊದಲ ತಲೆಮಾರಿನ ದಲಿತ ಕವಿ ಡಿ.ಗೋವಿಂದ ದಾಸ್, ಡಾ.ಎಸ್.ಎಲ್. ಭೈರಪ್ಪ, ಶ್ರವಣಬೆಳಗೊಳ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿ, ಜ್ವಾಲನಯ್ಯ, ಇಸ್ರೋ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್, ದಸಂಸ ರಾಜ್ಯ ಸಂಚಾಲಕರಾಗಿದ್ದ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ, ಬೇಲೂರು ಕೃಷ್ಣಮೂರ್ತಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಹೆಚ್.ಎಂ. ಶಿವಣ್ಣ ಮೊದಲಾದವರ ಹೆಸರುಗಳನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅನೇಕ ಮಹನೀಯರಿಗೆ ಹಾಸನ ಜನ್ಮ ನೀಡಿದೆ, ಅಂತೆಯೇ ಸಾಹಿತ್ಯ, ವಿಜ್ಞಾನ, ನಾಟಕ, ಜಾನಪದ, ಸಮಾಜಪರ ಹೋರಾಟ ಮತ್ತು ಜೈನ ತತ್ವದ ಪರಂಪರೆ, ಸಂಸ್ಕ ತಿಯ ಅಭಿವ್ಯಕ್ತಿಯನ್ನು ಹೊಂದಿದೆ.

ಈ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸಬೇಕಾದ ಜವಾಬ್ದಾರಿ ನಗರ ಪಾಲಿಕೆ, ನಮ್ಮೆಲ್ಲರ ಮೇಲಿರುವುದರಿಂದ ಎಲ್ಲ ಸಾಧಕರಿಗೂ ಮನ್ನಣೆ ನೀಡಬೇಕು. ಇದರಿಂದ ಜಿಲ್ಲೆಯ ಗೌರವ ಮತ್ತು ಐತಿಹಾಸಿಕ ಪರಂಪರೆ ಇನ್ನಷ್ಟು ಪ್ರಭಾವಿಯಾಗುತ್ತದೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಮತ್ತು ಆಯುಕ್ತರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ಎಸ್.ಸಿ.-ಎಸ್.ಟಿ. ನಿವೃತ್ತ ನೌಕರರ ಸಂಘದ ಎಂ.ಕೃಷ್ಣಯ್ಯ, ಹಂದಿಜೋಗಿ ಸಂಘದ ರಾಜ್ಯ ಉಪಾಧ್ಯಕ್ಷ ಗೋವಿಂದ ರಾಜು, ಮುಖಂಡರಾದ ರಾಮು, ತೋಟೇಶ್ ಇದ್ದರು.

At the same time, in addition to the dignitaries named in the municipal announcement, the names of many notables in the district should also be considered.
error: Content is protected !!