ಹಾಸನ: ಹಾಸನಾಂಬೆ ಜಾತ್ರೆಗೆ ಹೆಲಿ ಟೂರಿಸಂ ಚಾಲನೆ: ಸಾಂಸ್ಕೃತಿಕ ವೈಭವಕ್ಕೆ ಚಾಲು

As part of the Hassanambe-Siddeshwaraswamy Jatra Mahotsav, a Hassan Heli Tourism Package has been arranged from the sky this year as well, and was launched by District In-charge Minister Krishna Byre Gowda today.

ಹಾಸನ: ಹಾಸನಾಂಬೆ-ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಈ ವರ್ಷವೂ ಆಗಸದಿಂದ ಹಾಸನ ಹೆಲಿ ಟೂರಿಸಂ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದರು.

ತಾಯಿ ಹಾಸನಾಂಬೆ ದೇವಿಯ ಸ್ಥಳ ಪುರಾಣ, ಐತಿಹಾಸಿಕವಾಗಿ ಸಪ್ತ ಮಾತೃಕೆಯರ ಆಶೀರ್ವಾದ ಪಡೆಯಲು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಟೂರ್ ಪ್ಯಾಕೇಜ್ ಏರ್ಪಡಿಸಲಾಗಿದೆ.

ಹೇಳಿ ಕೇಳಿ ಹಾಸನ ಜಿಲ್ಲೆ ಶಿಲ್ಪ ಕಲೆಗಳ ಬೀಡಾಗಿರುವುದರಿಂದ ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಮುಂಜಾಬಾದ್ ಕೋಟೆ, ಹೇಮಾವತಿ ಮತ್ತು ಯಗಚಿ ಜಲಾಶಯ, ಮೂಕನಮನೆ ಜಲಪಾತ ಇತರೆ ಪ್ಷೇಕ್ಷಣೀಯ ಸ್ಥಳಗಳಿಗೆ ಟೂರ್ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಪಂ ಸಿಇಒ ಡಾ.ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ ಮೊದಲಾದವರಿದ್ದರು. ಆಗಸದಿಂದ ಹಾಸನ ಹೆಲಿರೈಡ್ ಮಾಡುವವರಿಗೆ ಒಬ್ಬರಿಗೆ 42೦೦ ದರ ನಿಗದಿ ಪಡಿಸಲಾಗಿದೆ.

ಸಂಜೆ ಹೇಮಾವತಿ ಪ್ರತಿಮೆ ಬಳಿ ಜಾನಪದ ಜಾತ್ರಾ ಮಹೋತ್ಸವ ಉದ್ಘಾಟನೆ ಆಗಲಿದೆ, ಅದಾದ ಬಳಿಕ ಸುಭಾಷ್‌ಚೌಕದ ಬಳಿ ಜಾನಪದ ನೃತ್ಯೋತ್ಸವ ಮತ್ತು ಬಿಎಂ ರಸ್ತೆಯ ಸಿಲ್ವರ್‌ಜ್ಯಬಿಲಿ ಪಾರ್ಕ್ನಲ್ಲಿ ಆಕರ್ಷಕ ಫಲ ಪುಷ್ಪ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ಒಟ್ಟಿನಲ್ಲಿ ದೇವಿಯ ದರ್ಶನಕ್ಕೆ ಬರುವವರಿಗೆ ಹಲವು ರೀತಿಯ ಸೌಂದರ್ಯ, ಸಂಗೀತ, ನೃತ್ಯ ಕಣ್ತುಂಬಿಕೊಳ್ಳುವುದರ ಜೊತೆಗೆ ವಿಶೇಷ ಮನರಂಜನೆ ಪಡೆಯಬಹುದಾಗಿದೆ. ಈ ಎಲ್ಲದಕ್ಕೂ ಮಳೆರಾಯ ಬಿಡುವು ನೀಡಿದರೆ ಎಲ್ಲರೂ ಸುಸೂತ್ರವಾಗಿ ನಡೆದು ನಗರಕ್ಕೆ ಬರುವವರಿಗೆ ಸಖತ್ ಮನರಂಜನೆ ಸಿಗಲಿದೆ.