20.1 C
Munich
Home News ಅರಕಲಗೂಡಿನ ಮಧುಸೂದನ್‌ಗೆ ಹಾಸನದಲ್ಲಿ ಮೇಲ್ದರ್ಜೆ ಹುದ್ದೆ

ಅರಕಲಗೂಡಿನ ಮಧುಸೂದನ್‌ಗೆ ಹಾಸನದಲ್ಲಿ ಮೇಲ್ದರ್ಜೆ ಹುದ್ದೆ

Arakalgudu V Madhusudan, who is working as a Broadcasting Manager at All India Radio, has been promoted to Program Manager.

ಹಾಸನ: ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ನಿರ್ವಾಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅರಕಲಗೂಡು ವಿ ಮಧುಸೂದನ್ ಅವರು ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದಾರೆ.

ಅವರನ್ನು ಹಾಸನ ಆಕಾಶವಾಣಿ ಕೇಂದ್ರದಲ್ಲಿಯೇ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಮುಂದುವರಿಸಲಾಗಿದೆ.

2011ರಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗದ ಮೂಲಕ ಆಯ್ಕೆಗೊಂಡ ಇವರು ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ನಿರ್ವಹಣಾಧಿಕಾರಿಯಾಗಿ 10 ವರ್ಷಗಳ ಕಾಲ ಸುಧೀರ್ಘ ಹಾಗೂ ಸಾರ್ಥಕ ಸೇವೆ ಸಲ್ಲಿಸಿ 2021 ರಲ್ಲಿ ಹಾಸನ ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡು ಸೇವೆಸಲ್ಲಿಸುತ್ತಿದ್ದಾರೆ.

ಪ್ರಸಾರ ನಿರ್ವಹಣಾಧಿಕಾರಿಯಾಗಿ ಇವರು ನಿರ್ಮಿಸಿದ ನಾಲ್ಕು ಬಾನುಲಿ ರೂಪಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿದೆ.

ಸದ್ಯ ಆಕಾಶವಾಣಿಯ ಕೃಷಿ, ಆರೋಗ್ಯ ಹಾಗೂ ಇತರೆ ವಿಭಾಗಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇವರು ಮೂಲತಃ ಅರಕಲಗೂಡು ಪಟ್ಟಣದವರು.

ಪದೋನ್ನತಿ ಹೊಂದಿದ ಇವರನ್ನು ಆಕಾಶವಾಣಿಯ ಸಿಬ್ಬಂದಿ ವರ್ಗ ಅಭಿನಂದಿಸಿದೆ.

error: Content is protected !!