ಹಾಸನ : ಸಂತೋಷ್ ಲಾಡ್ ಅಭಿಮಾನಿಗಳ ಬಳಗದ ವತಿಯಿಂದ ಶುಕ್ರವಾರ ಅವರ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆಯನ್ನು ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ಕೆ ಮಹೇಶ್ ಹಾಗೂ ಮಕ್ಕಳತಜ್ಞ ಡಾ. ದಿನೇಶ್ ಭೈರೇಗೌಡ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 597 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ಕೆ ಮಹೇಶ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಚಿವ ಸಂತೋಷ್ ಲಾಡ್ ರವರು ಅನುಕೂಲ ಆಗುವ ರೀತಿಯಲ್ಲಿ ಋತುಚಕ್ರ ರಜೆಯನ್ನು ಘೋಷಿಸಿದ್ದು ಅದರ ಸದುಪಯೋಗವನ್ನು ರಾಜ್ಯದ ಎಲ್ಲಾ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವಾಗಿ ಮಹಿಳೆಯರ ಋತುಚಕ್ರ ದಿನದ ಅವಶ್ಯಕತೆ ಮತ್ತು ಅರಿವು ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಡಾ. ದಿನೇಶ್ ಬೈರೇಗೌಡ ಮಾತನಾಡಿ, ಋತುಚಕ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಉಪನ್ಯಾಸ ನೀಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಕರಾದ ಇಮ್ರಾನ್ ಖಾನ್ ಕಾರ್ಮಿಕ ಘಟಕದ ಹಾಸನ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಮತ್ತು ವಿನೋದ್ ಕುಮಾರ್ ಎಚ್,ಆರ್ ಹಾಸನ ಜಿಲ್ಲಾ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.
An essay competition was organized by Santosh Lad’s fan club on Friday as part of his birthday at the Government Women’s First Grade College in Hassan.










