11.1 C
Munich
Home ಕ್ರೈಮ್‌ ಸಚಿವ ಮುನಿಯಪ್ಪ ಕಾರಿಗೆ ಗುದ್ದಿದ ಇನ್ನೋವಾ; ಕಾರುಗಳು ಜಖಂ

ಸಚಿವ ಮುನಿಯಪ್ಪ ಕಾರಿಗೆ ಗುದ್ದಿದ ಇನ್ನೋವಾ; ಕಾರುಗಳು ಜಖಂ

ಹಾಸನ: ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಾಂತಿಗ್ರಾಮ ಟೋಲ್ ಬಳಿ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.


ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಪೊಲೀಸರು ತಕ್ಷಣವೇ ಎಚ್ಚೆತ್ತು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಚಿವರನ್ನು ಬದಲಿ ವಾಹನದಲ್ಲಿ ಸಮಾವೇಶ ಸ್ಥಳಕ್ಕೆ ಕಳಿಸಿಕೊಡಲಾಯಿತು.

error: Content is protected !!