ಹಾಸನ : ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಯನ್ನಾಗಿ ಎಂ.ಆರ್.ವೆಂಕಟೇಶ್ ಅವರನ್ನು ಹಾಗೆಯೇ ಹಾಸನ ಜಿಲ್ಲಾ ಮಾದರ ಮಹಾಸಭಾ ಅಧ್ಯಕ್ಷರನ್ನಾಗಿ ವಿಜಯಕುಮಾರ್ ರವರನ್ನು ನೇಮಕ ಮಾಡಿದ್ದು, ಸಮಾಜದ ಇತರೆ ನಾಯಕರನ್ನ ಒಳಗೊಂಡಂತೆ ಸದಸ್ಯತ್ವ ನೋಂದಣಿಯನ್ನು ಒಂದು ತಿಂಗಳ ಒಳಗಾಗಿ ಮುಗಿಸಬೇಕು ಎಂದು ಮಾದರ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಕೆ. ಹೆಚ್. ಮುನಿಯಪ್ಪ ಸೂಚನೆ ನೀಡಿದರು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಮಾದರ ಮಹಾಸಭಾ ಸದಸ್ಯತ್ವ ನೋಂದಣಿಯ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಕಡು ಬಡವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವುದಾಗಿರುತ್ತದೆ.
ಸಮಾಜದಲ್ಲಿ ಪಕ್ಷಾತೀತವಾಗಿ ಎಲ್ಲಾ ನಾಯಕರನ್ನು ಒಳಗೊಂಡಂತೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯಮಟ್ಟದ ಎಲ್ಲಾ ನಾಯಕರಗಳು ಸೇರಿ ಒಟ್ಟಾಗಿ ಸಮುದಾಯವನ್ನು ಒಗ್ಗೂಡಿಸುವ ಹಾಗೆಯೇ ಬೆಳೆಸುವ ಕೆಲಸ ಮಾಡಬೇಕಾಗಿದೆ. ನಾವು ಕೂಡ ಇತರೆ ಮುಂದುವರೆದ ಜನಾಂಗದಂತೆ ಬದುಕುವ ದಾರಿಯನ್ನ ಕಟ್ಟಿಕೊಳ್ಳಬೇಕಾಗಿದೆ.
ಸಮಾಜದ ಹೇಳಿಕೆಗಾಗಿ ಎಲ್ಲರೂ ಕೂಡ ಶ್ರಮಿಸಬೇಕಾಗಿದೆ. ಈ ಮಾದಿಗ ಸಮಾಜ ಸ್ವಾಭಿಮಾನದಿಂದ ಬೆಳೆಯಬೇಕು, ಸ್ವಾಭಿಮಾನದಿಂದ ಈ ಸಮಾಜದ ಅಭಿವೃದ್ಧಿಗೆ ದುಡಿಯಬೇಕು ಹಾಗೂ ಹೋರಾಟ ನ್ಯಾಯಯುತವಾಗಿರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಸಮುದಾಯದ ಸಂಘಟನೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಬಂದಿದ್ದೇನೆ. ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಮಾದರ ಮಹಾಸಭಾದ ಹಾಸನ ಜಿಲ್ಲೆಯ ಅಧ್ಯಕ್ಷನಾಗಿ ಮೊದಲ ಅವಕಾಶ ಕೊಟ್ಟಿರುವ ರಾಜ್ಯಾಧ್ಯಕ ಮುನಿಯಪ್ಪ ಅವರು, ನಾರಾಯಣ ಸ್ವಾಮಿ ಅವರು, ಆಂಜನೇಯ ಅವರು ಚಂದ್ರಪ್ಪ ಅವರು ಸೇರಿದಂತೆ ಸಮುದಾಯದ ಸರ್ವ ನಾಯಕರಿಗೆ ನಾನು ಸದಾ ಋಣಿಯಾಗಿರುತ್ತೇನೆ.
ಅಷ್ಟೇ ಅಲ್ಲದೆ ಸಮುದಾಯದ ಅಭ್ಯುದಯಕ್ಕೆ ಸ್ಥಾಪಿಸಲ್ಪಟ್ಟಿರುವ ಮಹಾಸಭಾದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸಮರ್ಪಕವಾಗಿ ಭಾಗವಹಿಸಿ ರಾಜ್ಯ ನಾಯಕರ ಹಾಗೂ ಜಿಲ್ಲಾ ಉಸ್ತುವಾರಿಗಳಾದ ಎಂ.ಆರ್ ವೆಂಕಟೇಶ್ ಅವರ ಸೂಚನೆಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದ ಅವರು, ಜಿಲ್ಲೆಯ ಸಮುದಾಯದ ಬಂಧುಗಳು ಎಂದಿನಂತೆ ಸಹಕಾರ ಸಭಾಗಿತ್ವ ನೀಡಬೇಕು ಎಂದರು.
ಮಾದರ ಮಹಾಸಭಾದ ಮುಖಂಡ ಧರ್ಮಸೇನ ಅವರು ಮಾತನಾಡಿ, 2015ರಲ್ಲಿ ಪ್ರಾರಂಭವಾದ ಕರ್ನಾಟಕ ಮಾದರ ಮಹಾಸಭಾ (ರಿ) ಮಾದಿಗ ಸಮುದಾಯವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡುವ ಮಹತ್ತರ ವೇದಿಕೆಯಾಗಿದೆ. ಈ ಮಹಾಸಭಾ ನಮ್ಮ ಸಮುದಾಯಕ್ಕೆ ಚೈತನ್ಯದ ಚಿಲುಮೆ. ಮಾದಿಗ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ, ಐತಿಹಾಸಿಕ ಹಿನ್ನಲೆಯುಳ್ಳ ದೊಡ್ಡ ಸಮುದಾಯದಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರ ಇಂತಹ ಸಮುದಾಯವನ್ನು ಮುನ್ನೆಡೆಸುವ ಕೆಲಸವನ್ನು ಮಾದರ ಮಹಾಸಭಾ ಮಾಡುವ ಕೆಲಸ ಮಾಡಲಿದ್ದು, ಮಹಾಸಭಾದ ಉಪಯೋಗವನ್ನು ಸಮುದಾಯದ ಎಲ್ಲ ಬಂಧುಗಳು ಪಡೆದುಕೊಳ್ಳಬೇಕು ಎಂದ ಅವರು, ರಾಜ್ಯದಲ್ಲಿ ಮಾದಿಗ ಸಮುದಾಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಒಳಮೀಸಲಾತಿಯ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಮಾದರ ಮಹಾಸಭಾ ವನ್ನು ತನು ಮನ ಧನ ವನ್ನು ಅರ್ಪಿಸಿ ಬೆಳೆಸಿ ಮುನ್ನಡೆಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಂಸದರು ಹಾಗೂ ಸಮುದಾಯದ ಮುಖಂಡರಾದ ಚಂದ್ರಪ್ಪ ಅವರು ಮಾತನಾಡಿದರು.
ಸಭೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾದರ ಮಹಾಸಭಾದ ಮುಖ್ಯ ಸಂಚಾಲಕ ಬಿಕೆ ಶಿವಪ್ಪ, ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ವೈ ಹೆಚ್.ಹುಚ್ಚಯ್ಯ, ರಾಜ್ಯಾಧ್ಯಕ್ಷರು ಮಾದಿಗ ನೌಕರರ ಸಂಘ ಮಂಜುನಾಥ್ ಹೋಣಿಕೇರಿ, ಗ್ಯಾಸ್ ಚಂದ್ರ ಕಡೂರು, ಮಾದರ ಮಹಾಸಭಾ ಮಂಡ್ಯ ಚಂದ್ರಶೇಖರ್, ಹಾಸನ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಸಮಾಜ ಸೇವಕ ಮಧು ನಾಯಕ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಿ.ಆರ್ ಮಂಜುನಾಥ್, ABSP ದೇವರಾಜ್, ಮುನಿಸ್ವಾಮಿ, ತಾಲ್ಲೂಕು ಅಧ್ಯಕ್ಷ ಕಡಗ ಸತೀಶ್, ಹೊಳೆನರಸೀಪುರ ಸತೀಶ್, ಬೇಲೂರು ಬೈರೇಶ್, ಚನ್ನರಾಯಪಟ್ಟಣ ಪುನೀತ್, ಅರಕಲಗೂಡು ಚನ್ನಪ್ಪ, ಆಲೂರು ಶಿವಣ್ಣ, ಜಿಲ್ಲಾ ಸಮಿತಿ ಸದಸ್ಯ ವಸಂತಮ್ಮ ಶಿಕ್ಷಕರಾದ ರಘು, ಗೌತಮ್, ದೇವರಾಜ್, ಕಡುಬಿನ ಹೊಸಳ್ಳಿ ನಾಗರಾಜ್, HCN ಚಂದ್ರು, ಸಾಕ್ಷರತಃ ರಂಗಸ್ವಾಮಿ, ಚನ್ನರಾಯಪಟ್ಟಣ ಶ್ರೀನಿವಾಸ್, ವೀರಭದ್ರಪ್ಪ, ಗುತ್ತಿನಕೆರೆ ಶಿವಮೂರ್ತಿ, ದೊಡ್ಡಪುರ ಕುಮಾರಸ್ವಾಮಿ, ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರಾದ ಗಿರೀಶ್ ದೇಶಾಣಿ, ಕಿರಣ್ ಅರಕೆರೆ ಇತರರಿದ್ದರು.










