ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಸರಸ್ವತಿ ಪೂಜೆ – ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ ಕಾರ್ಯಕ್ರಮ

Administrative officer Dr. H. N. Chandrashekhar motivated the children by saying that if you do not have faith in yourself, even the faith you have in God will not bear fruit. When you have faith in yourself, success is certain

ಹಾಸನ: ಸ್ಕಾಲರ್ಸ್ ಶಾಲೆಯ ಸರಸ್ವತಿ ಪೂಜೆಯಲ್ಲಿ ಸಂಭ್ರಮಿಸಿದ ವಿದ್ಯಾರ್ಥಿಗಳು. ನಿಮ್ಮಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ಕೋಟಿ ದೇವರಲ್ಲಿ ಇಟ್ಟ ನಂಬಿಕೆಗೆ ಫಲವಿಲ್ಲ ನಿಮ್ಮಲ್ಲಿ ನಿಮಗೆ ನಂಬಿಕೆ ಯಾವಾಗ ಬರುತ್ತದೆಯೋ ಆಗ ಯಶಸ್ಸು ನಿಶ್ಚಿತ ಎಂದು ಆಡಳಿತ ಅಧಿಕಾರಿಗಳಾದ ಡಾಕ್ಟರ್ ಎಚ್. ಎನ್. ಚಂದ್ರಶೇಖರ್ ರವರು ಮಕ್ಕಳಿಗೆ ಪ್ರೇರಣೆಯನ್ನು ನೀಡಿದರು.

ಫೆಬ್ರುವರಿ 17 ರಿಂದ ಐ ಸಿ ಎಸ್ ಇ ಪರೀಕ್ಷೆಗಳು ಆರಂಭಗೊಳ್ಳಲಿದ್ದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ, ಜ್ಞಾನ ಮತ್ತು ಬುದ್ಧಿಯನ್ನು ನೀಡಿ ವಿದ್ಯೆ, ಐಶ್ವರ್ಯ ಮತ್ತು ಶುಭಗಳನ್ನು ಕರುಣಿಸಲಿ ಎಂಬ ಆಶಯದಿಂದ ಸ್ಕಾಲರ್ಸ್ ಶಾಲೆಯಲ್ಲಿ ಸರಸ್ವತಿ ಹೋಮ ಮತ್ತು ಪೂಜೆಯನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಸಂತಸದಿಂದ ಪೂಜೆಯಲ್ಲಿ ಪಾಲ್ಗೊಂಡು ಸರಸ್ವತಿಯ ಕೃಪೆಗೆ ಪಾತ್ರರಾದರು.

ಶಾರದಾಂಬೆಯು ಸದ್ವಿಧ್ಯೆಯನ್ನು ನೀಡಲಿ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಯನ್ನು ಬರೆದು ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಲಿ ಎಂದು ಶಾಲೆಯ ಆಡಳಿತಾ ಧಿಕಾರಿಗಳಾದ ಡಾ. ಎಚ್ ಎನ್ ಚಂದ್ರಶೇಖರ್ ರವರು ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.

ಶಾಲೆಯ ಸಂಸ್ಥಾಪಕರಾದ ಲಕ್ಷ್ಮೀನಾರಜಿ ಕಾರ್ಯದರ್ಶಿಗಳಾದ ಮಮತಾ ಚಂದ್ರಶೇಖರ್ ರವರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.