ಹಾಸನ: ನಗರದ ಸರ್ಕಾರಿ ವಿಜ್ಞಾನ ಕಾಲೇಜು, ಸ್ವಾಯತ್ತ ಇಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಯೂತ್ ರೆಡ್ ಕ್ರಾಸ್ ಘಟಕ, ಕ್ರೀಡಾ ವಿಭಾಗ , ಹೊಯ್ಸಳ ರೋವರ್ಸ್ ಕ್ರೀವ್ ಮತ್ತು ಶಾತಲಾ ರೇಂಜರ್ಸ್ ಘಟಕಗಳ ವತಿಯಿಂದ ಹಾಗೂ ತೆರಾ ಪಂಥ್ ಯುವ ಪರಿಷತ್ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು.
ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಚಾಲಕ ಪ್ರಸನ್ನ ಕುಮಾರ ಎಸ್.ಜಿ, ಸಹಪ್ರಾಧ್ಯಾಪಕರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾಚಾರ್ಯರು, ಪ್ರಾಧ್ಯಾಪಕರು, ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಥಾಟಿಸಿದರು.
ನಂತರ ಹಿಮ್ಸ್ ಆಸ್ಪತ್ರೆ ರಕ್ತದಾನ ಕೇಂದ್ರದ ಸಂಚಾಲಕರಾದ ಡಾ.ನಾಗಲಕ್ಷ್ಮೀ ಅವರು ರಕ್ತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ನಂತರ ತೆರಾ ಪಂಥ್ ಯುವ ಪರಿಷತ್ ಹಾಸನ ಸದಸ್ಯ ವಿಕಾಸ್ ಕೊಠಾರಿ ಅವರು ರಕ್ತದಾನ ಮಾಡುವುದರ ಮೂಲಕ ಸಮಾಜ ಮುಖಿಯಾಗಿ ಸೇವೆ ಮಾಡಲು ಕೋರಿದರು.
ನಂತರ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಸನ್ನ ಕೆ.ಎಸ್.ರವರು ಸಂಕ್ಷಿಪ್ತವಾಗಿ ರಕ್ತದಾನದ ಬಗ್ಗೆ ಮಾತನಾಡಿದರು. ನಂತರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿ ಅವರು ವೈದ್ಯರು ಸೇರಿದಂತೆ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ರಕ್ತದಾನಿಗಳಿಗೆ ಹಾಗೂ ನೆರೆದಿರುವ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ 75ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸಹಪ್ರಾಧ್ಯಾಪಕರಾದ ಕೃಷ್ಣಮೂರ್ತಿ ಹಾಗೂ ಉಪನ್ಯಾಸಕ ಡಾ.ರವಿ ಎನ್.ಸಿ ರವರು ರಕ್ತಾದಾನ ಮಾಡಿ ವಿದ್ಯಾರ್ಥಿಗಳಿಗೆ ರಕ್ತದಾನ ಮಾಡಲು ಉತ್ತೇಜಿಸಿದರು.










