19.5 C
Munich
Home ಕ್ರೈಮ್‌ ಹೃದಯಾಘಾತಕ್ಕೆ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಬಲಿ!

ಹೃದಯಾಘಾತಕ್ಕೆ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಬಲಿ!

ಹಾಸನ: ಹೃದಯಾಘಾತದಿಂದ 26 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಮೃತಪಟ್ಟ ಆಘಾತಕಾರಿ ಘಟ‌ನೆ ಸಕಲೇಶಪುರ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ಕಾಫಿ ಬೆಳೆಗಾರ ಹೇಮಂತ್ ಮತ್ತು ಸರಳ ದಂಪತಿ ಪುತ್ರ, ಬೆಂಗಳೂರಿನ ಸಾಫ್ಟ್‌ವೇರ್‌ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಸಮರ್ಥ್ (26) ಮೃತ ಯುವಕ.

ಕಳೆದ ಕೆಲವು ತಿಂಗಳುಗಳಿಂದ ‘ವರ್ಕ್ ಫ್ರಂ ಹೋಮ್’ ಸೌಲಭ್ಯ ಪಡೆದು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು.

ನಿನ್ನೆ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದ ಆತ ಸಂಜೆ ಎದ್ದು ನೀರು ಕುಡಿದ ನಂತರ ಹಠಾತ್ ಕುಸಿದು ಬಿದ್ದರು. ತಕ್ಷಣವೇ ಕುಟುಂಬಸ್ಥರು ವೈದ್ಯರನ್ನು ಕರೆಸಿದರೂ, ತಪಾಸಣೆ ವೇಳೆ ಸಮರ್ಥ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದರು.

ಈ ಘಟನೆ ಸಮರ್ಥ್ ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿಸಿದೆ.

error: Content is protected !!