ಬೇಲೂರು: ನಿರಂತರ ಅನಾರೋಗ್ಯದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಿವೃತ್ತ ಯೋಧ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳೇಬೀಡು ಹೋಬಳಿ, ಘಟ್ಟದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ.ಕೆ.ಕಲ್ಲೇಶ್ (60) ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ. ಎರಡು ವಿವಾಹವಾಗಿದ್ದ ಜಿ.ಕೆ.ಕಲ್ಲೇಶ್, ಕೆಲಸದಿಂದ ನಿವೃತ್ತಿಯಾಗಿ ಬರುವಾಗಲೇ ಪಿಸ್ತೂಲ್ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು. ಹಾಗಾಗಿ ಬಂದೂಕು ಅವರ ಜೊತೆಯಲ್ಲಿತ್ತು.
ಈ ನಡುವೆ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು,ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಅದು ಕಡಿಮೆ ಆಗಿರಲಿಲ್ಲ. ಏತನ್ಮಧ್ಯೆ ಕಳೆದ ಎರಡು ದಿನಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ನಿ ಬಳಿ ಹೇಳಿಕೊಂಡಿದ್ದರು. ಅದಕ್ಕವರು ಸಮಾಧಾನ ಮಾಡಿದ್ದರು.
ಇಂದು ಬೆಳಿಗ್ಗೆ ಸಕಲೇಶಪುರ ಪೊಲೀಸ್ ಠಾಣೆಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಕೂಡಲೇ ಸಕಲೇಶಪುರ ಪೊಲೀಸರು, ಹಳೇಬೀಡು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಘಟ್ಟದಹಳ್ಳಿ ಗ್ರಾಮಕ್ಕೆ ಪೊಲೀಸರು ದೌಡಾಯಿಸಿದರು. ಅಷ್ಟರಲ್ಲಿ ಕಲ್ಲೇಶ್ ವಾಸದ ಮನೆಯಲ್ಲಿಯೇ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A retired soldier, who was suffering from mental depression due to his ongoing illness, committed suicide by shooting himself in the head with a pistol in Ghattadahalli village, Halebidu Hobli, in the taluk.








