ಆಲೂರು: ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ ಇತ್ತೀಚಿಗೆ ನಡೆದಿದೆ.
ಗ್ರಾಮದ ಪ್ರದೀಪ್ (39) ಮೃತರು. ಅಲ್ಪ ಜಮೀನಿನಲ್ಲಿ ಶುಂಠಿ ಹಾಗೂ ಮೆಕ್ಕೆಜೋಳ ಬೆಳೆ ಕೈಗೊಂಡಿದ್ದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೆಳೆ ನಾಶವಾಗಿತ್ತು. ಕೃಷಿಗಾಗಿ ಪ್ರದೀಪ್ 2 ಲಕ್ಷ ರೂ. ಕೈ ಸಾಲ ಹಾಗು ಅಲ್ಪಾವಧಿ ಸಾಲ ಪಡೆದಿದ್ದರು. ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸಲು ಸಾಧ್ಯವಾಗದೆ ಜಿಗುಪ್ಸೆಯಿಂದ ಕಳೆದ ರಾತ್ರಿ ಮನೆಯಲ್ಲೇ ವಿಷ ಸೇವಿಸಿದ್ದರು. ಅಸ್ವಸ್ಥರಾಗಿ ಬಿದ್ದಿದ್ದ ಪ್ರದೀಪ್ನನ್ನು ಕುಟುಂಬಸ್ಥರು ಹಿಮ್ಸೌಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










