ಸಕಲೇಶಪುರ: ನಿರಂತರ ಮಳೆ ಕುಸಿದ ಮನೆ ಗೋಡೆ

A portion of the wall of the house of Byadara Jagali Lokesh near Sullakki village under Byakaravalli Gram Panchayat limits collapsed at 7.45 am on Tuesday due to the heavy rains that have been falling for the past four to five months, causing extensive damage.

ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದ ಸಮೀಪದ ಬ್ಯಾಡರ ಜಗಲಿ ಲೋಕೇಶ್ ಎಂಬುವರ ಮನೆಯ ಒಂದು ಭಾಗದ ಗೋಡೆ ಕಳೆದ ನಾಲ್ಕೈದು ತಿಂಗಳುಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆ 7.45ರ ಸಮಯದಲ್ಲಿ ಕುಸಿದು ವ್ಯಾಪಕ ಹಾನಿ ಸಂಭವಿಸಿದೆ.

ಈ ಸಂಧರ್ಭದಲ್ಲಿ ಮನೆಯ ಪಕ್ಕ ನಿಲ್ಲಿಸಿದ್ದ ಆಟೋ ಮೇಲೆ ಗೋಡೆ ಕುಸಿದಿದ್ದು ಇದರಿಂದ ಆಟೋ ಸಹ ಸಂಪೂರ್ಣವಾಗಿ ಜಖಂಗೊಂಡು ಅಪಾರ ನಷ್ಟ ಸಂಭವಿಸಿರುತ್ತದೆ. ಅದೃಷ್ಟವಷಾತ್ ಮನೆಯಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ತಾಲೂಕು ಆಡಳಿತ ಇತ್ತ ಗಮನವರಿಸಿ ಬಡ ಆಟೋ ಚಾಲಕನ ಮನೆಗೆ ಹಾಗೂ ಜಖಂಗೊಂಡ ಆಟೋಗೆ ಸೂಕ್ತ ಪರಿಹಾರ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.