ಸಕಲೇಶಪುರ: ಮಂಜರಾಬಾದ್ ಕೋಟೆಯ ಒಂದು ಭಾಗ ಮಳೆಯಿಂದ ಕುಸಿತ ಉಂಟಾಗಿದೆ.
ಕೋಟೆಯ ಒಳಭಾಗದ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದು ಬಿದ್ದಿದೆ. ತಡರಾತ್ರಿ ಈ ಘಟನೆ ಸಂಭವಿಸಿದೆ. ಮುಂಜಾನೆ ಕೋಟೆಯ ಕಾವಲುಗಾರ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬಂದಾಗ ಗೋಚರಿಸಿದೆ.
ನಕ್ಷತ್ರ ಆಕಾರದಲ್ಲಿರುವ ಮಂಜರಬಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ, ದಿನನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ ೧೭೮೫ ರಲ್ಲಿ ನಿರ್ಮಾಣ ಮಾಡಿ ೧೭೯೨ ರಲ್ಲಿ ಪೂರ್ಣಗೊಳಿಸಿದ್ದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಕೇಂದ್ರದಿAದ ೫ ಕಿ.ಮೀ. ಅಂತರದಲ್ಲಿ ಬೆಂಗಳೂರು-ಮAಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ರಚಿತಗೊಂಡಿದೆ.
ಸಮುದ್ರಮಟ್ಟದಿಂದ ಈ ಕೋಟೆಯು ೯೮೮ ಮೀಟರ್ ಎತ್ತರದಲ್ಲಿದೆ. ಅಂದರೆ ೩೩೯೩ ಅಡಿಗಳು. ೨೫೨ ಮೆಟ್ಟಿಲುಗಳನ್ನು ಏರಿದರೆ ಸಿಗುವ ಈ ಕೋಟೆಯು ನಕ್ಷತ್ರಾಕಾರದ ರಚನೆಯುಳ್ಳ ವಿಶಿಷ್ಟ ತಂತ್ರವನ್ನೊಳಗೊAಡಿದೆ. ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು ೧೯೫೬ರ ಪುರಾತತ್ವ ಇಲಾಖೆಯು ವಹಿಸಿಕೊಂಡಿದೆ.










