ಹಾಸನ:ನಗರದಲ್ಲಿ ಜನವರಿ 26ರಂದು ಆಯೋಜನೆಯಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಗರದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಅನಾವರಣಗೊಳಿಸಲಾಯಿತು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ರಾಜಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಸುರೇಶ್ ಕುಮಾರ್ ಹೆಚ್.ಎಂ., ನಗರಸಭಾ ಸದಸ್ಯರಾದ ದಯಾನಂದ್, ಖ್ಯಾತ ಉದ್ಯಮಿಗಳಾದ ಕಿರಣ್ ಸೇರಿದಂತೆ ಸಮಿತಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನವರಿ 26ರಂದು ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸಂಜೆ 5 ಗಂಟೆಯಿಂದ “ನಾಟ್ಯಕಲಾ ನಿವಾಸ್” ಖ್ಯಾತಿಯ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ಸಂಜೆ 6 ಗಂಟೆಗೆ ಖ್ಯಾತ ಪ್ರವಚನಕಾರರಾದ ರಾಜೇಶ್ ಪದ್ಮಾರ್ ಅವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ.
ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿ ಹಾಗೂ ಧಾರ್ಮಿಕ ಏಕತೆ ವೃದ್ಧಿಸುವ ಉದ್ದೇಶವನ್ನು ಹಿಂದೂ ಸಮಾಜೋತ್ಸವ ಹೊಂದಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿಂದೂ ಸಮಾಜೋತ್ಸವ ಸಮಿತಿಯು ಪ್ರಕಟಣೆಯಲ್ಲಿ ಮನವಿ ಮಾಡಿದೆ.










