20.3 C
Munich
Home ಕ್ರೈಮ್‌ BREAKING NEWS-ಹಾಸನ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಕಾಫಿ ತೋಟದಲ್ಲಿ ಮರಿ ಆನೆಯೊಂದಿಗೆ ಪ್ರಾಣಬಿಟ್ಟ...

BREAKING NEWS-ಹಾಸನ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಕಾಫಿ ತೋಟದಲ್ಲಿ ಮರಿ ಆನೆಯೊಂದಿಗೆ ಪ್ರಾಣಬಿಟ್ಟ ತಾಯಿ ಆನೆ

A horrific incident took place on Saturday night in which two wild elephants were electrocuted at ABC Estate near Guddebetta village in Sakleshpur taluk.

ಹಾಸನ, ಜೂನ್ 15: ಸಕಲೇಶಪುರ ತಾಲೂಕಿನ ಗುಡ್ಡೆಬೆಟ್ಟ ಗ್ರಾಮದ ಬಳಿಯ ಎಬಿಸಿ ಎಸ್ಟೇಟ್‌ನಲ್ಲಿ ಶನಿವಾರ ರಾತ್ರಿ ಎರಡು ಕಾಡಾನೆಗಳು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ.

ತಾಯಿ ಆನೆಯೊಂದಿಗೆ ಸಂಚರಿಸುತ್ತಿದ್ದ ಮರಿಯಾನೆ ತಾಯಿಯೊಂದಿಗೆ ತಾನೂ ಪ್ರಾಣ ಕಳೆದುಕೊಂಡು ಬಿದ್ದಿದೆ.

ಗಾಳಿ-ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕಾರಣ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಅರಸಿ ಕಾಫಿ ತೋಟದೊಳಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

error: Content is protected !!