17.8 C
Munich
Home News ಅರೇಹಳ್ಳಿ:ಸೋಲಾರ್‌ ಬೇಲಿ ದಾಟಲು ಕಾಫಿ ಗಿಡ ಕಿತ್ತೆಸೆದ ಕಾಡಾನೆಗಳು; ಗ್ರಾಮಸ್ಥರಲ್ಲಿ ಆತಂಕ

ಅರೇಹಳ್ಳಿ:ಸೋಲಾರ್‌ ಬೇಲಿ ದಾಟಲು ಕಾಫಿ ಗಿಡ ಕಿತ್ತೆಸೆದ ಕಾಡಾನೆಗಳು; ಗ್ರಾಮಸ್ಥರಲ್ಲಿ ಆತಂಕ

A herd of five wild elephants has uprooted coffee plants to cross a solar electric fence installed in the plantation in Hosamane village of Arehalli hobli in Belur taluk, causing concern among farmers.

ಅರೇಹಳ್ಳಿ: ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ಹೊಸಮನೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ರೈತರಲ್ಲಿ ಆತಂಕ ಮೂಡಿಸಿದ್ದು ಐದು ಕಾಡಾನೆಗಳ ಗುಂಪು ತೋಟದಲ್ಲಿ ಅಳವಡಿಸಿದ್ದ ಸೋಲಾರ್‌ ವಿದ್ಯುತ್‌ ತಂತಿ ಬೇಲಿಯನ್ನು ದಾಟಲು ಕಾಫಿ ಗಿಡಗಳನ್ನು ಕಿತ್ತೆಸೆದು ಹಾಕಿ ದಾಟಿವೆ.

ಹೊಸಮನೆ ಗ್ರಾಮದ ಶ್ರೀನಿವಾಸ್‌‍ ಅವರಿಗೆ ಸೇರಿದ ತೋಟದಲ್ಲಿ ಮೂರು ಆನೆ ಹಾಗೂ ಎರಡು ಮರಿಗಳಿದ್ದ ಗುಂಪು ಕಾಣಿಸಿಕೊಂಡಿತ್ತು. ಪಕ್ಕದ ಜಮೀನಿಗೆ ತೆರಳಲು ಅಡ್ಡಿಯಾಗಿದ್ದ ಸೋಲಾರ್‌ ವಿದ್ಯುತ್‌ ತಂತಿ ಬೇಲಿಯನ್ನು ದಾಟಲು ಕಾಡಾನೆಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಐವತ್ತಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಇತರ ಸಣ್ಣ ಮರಗಿಡಗಳನ್ನು ಕಿತ್ತು ತಂತಿ ಬೇಲಿಯ ಮೇಲೆ ಹಾಕಿ ನಂತರ ಅದನ್ನು ದಾಟಿ ಮುಂದಕ್ಕೆ ಸಾಗಿವೆ.

ಇದೇ ವೇಳೆ ಕಾಡಾನೆಗಳನ್ನು ಓಡಿಸಲು ಮುಂದಾದ ನಾಯಿಯನ್ನು ಕಂಡ ಗುಂಪಿನಲ್ಲಿದ್ದ ಒಂಟಿ ಕಾಡಾನೆಯೊಂದು ರೋಷದಿಂದ ನಾಯಿಯ ಬೆನ್ನಟ್ಟಿದೆ. ಅದೃಷ್ಟವಶಾತ್‌ ಸೋಲಾರ್‌ ವಿದ್ಯುತ್‌ ಬೇಲಿಯ ರಕ್ಷಣೆಯಿಂದ ನಾಯಿ ಅಪಾಯದಿಂದ ಪಾರಾಗಿದೆ. ಈ ಘಟನೆ ಸ್ಥಳೀಯರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.

ಕಾಡಾನೆಗಳ ದಾಂಧಲೆಯಿಂದ ಭಯಗೊಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾಡಾನೆಗಳನ್ನು ಅರಣ್ಯ ಪ್ರದೇಶದತ್ತ ಹಿಮೆಟ್ಟಿಸಿದ್ದಾರೆ.

A herd of five wild elephants has uprooted coffee plants to cross a solar electric fence installed in the plantation in Hosamane village of Arehalli hobli in Belur taluk, causing concern among farmers.

error: Content is protected !!