20.1 C
Munich
Home ಕ್ರೈಮ್‌ ಹಾಸನ: ಕಾಡೆಮ್ಮೆ ದಾಳಿಗೆ ರೈತ ಬಲಿ-ಕಾಡಾನೆ ಹಾವಳಿಯಿಂದ ಬಸವಳಿದ ಮಲೆನಾಡಿನ‌ ರೈತರಿಗೆ ಹೊಸ ಆತಂಕ

ಹಾಸನ: ಕಾಡೆಮ್ಮೆ ದಾಳಿಗೆ ರೈತ ಬಲಿ-ಕಾಡಾನೆ ಹಾವಳಿಯಿಂದ ಬಸವಳಿದ ಮಲೆನಾಡಿನ‌ ರೈತರಿಗೆ ಹೊಸ ಆತಂಕ

ಹಾಸನ, ಮೇ 05: ಸಕಲೇಶಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಡೆಮ್ಮೆ ದಾಳಿಗೆ ರೈತ ತಿಮ್ಮಪ್ಪ (60) ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ತಿಮ್ಮಪ್ಪ ಅವರು ತಮ್ಮ ಜಮೀನಿನ ಕಡೆಗೆ ತೆರಳುತ್ತಿದ್ದ ವೇಳೆ ಕಾಡೆಮ್ಮೆ ಏಕಾಏಕಿ ದಾಳಿ ಮಾಡಿದೆ. ಕಾಡೆಮ್ಮೆ ಗುದ್ದಿದ ಪರಿಣಾಮ ತಿಮ್ಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಘಟನೆಯಿಂದ ಕುಪಿತರಾದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಿಮ್ಮಪ್ಪ ಅವರ ಶವವನ್ನು ಮೇಲೆತ್ತಲು ಬಿಡದೆ ಪ್ರತಿಭಟನೆ ನಡೆಸಿದ್ದಾರೆ.

error: Content is protected !!