ಸಕಲೇಶಪುರ: ರಸ್ತೆ ಪಕ್ಕದ ಕಲ್ಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

A biker died after his bike collided with a roadside rock. The incident took place near Kattepura, Hobli, Belagod, taluk.

ಸಕಲೇಶಪುರ: ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಬೆಳಗೋಡು ಹೋಬಳಿ ಕಟ್ಟೆಪುರ ಬಳಿ ಘಟನೆ ನೆಡೆದಿದೆ.

ಮೂಗಲಿ ಗ್ರಾಮದ ಮಂಜುನಾಥ್(35) ಮೃತ ದುರ್ದೈವಿ.
ಶನಿವಾರ ಮುಂಜಾನೆ ಬೆಳಗೋಡು ಕಡೆಯಿಂದ ಮೂಗಲಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ.

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.