8.9 C
Munich
Home News ಅರಸೀಕೆರೆಯ ವಾಚನಾಲಯ, ಹೇಗಿತ್ತು? ಹೇಗಾಯಿತು?

ಅರಸೀಕೆರೆಯ ವಾಚನಾಲಯ, ಹೇಗಿತ್ತು? ಹೇಗಾಯಿತು?

-ಶ್ರೀರಾಮ ಜಮದಗ್ನಿ

ಅರಸೀಕೆರೆ: ಪಟ್ಟಣದ ಹೃದಯಭಾಗದಲ್ಲಿರುವ ಶತಮಾನದ ಇತಿಹಾಸವಿರುವ ವಾಚನಾಲಯವನ್ನು 1905 ರಲ್ಲಿ ರೈಲ್ವೆ ಕಂಟ್ರಾಕ್ಟರ್ ಆಗಿದ್ದ ಶ್ರೀ. ತುಳಸೀದಾಸ್ ವಾಗ್ಜಿ ಅವರು ಸಾರ್ವಜನಿಕರ ಉಪಯೋಗಕ್ಕಾಗಿ 60 x 80 ಅಡಿ ಅಳತೆಯ ನಿವೇಶನದಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿ, ಅದನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ “The Sree Krishnaraja Wadiyar Literary Institute” ಎಂದು ನಾಮಕರಣ ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ದಾನವನ್ನಾಗಿ ನೀಡಿದರು.

ಅಂದಿನಿಂದ ಈ ಕಟ್ಟಡ ಇರುವ ರಸ್ತೆಯನ್ನು “ವಾಚನಾಲಯ ರಸ್ತೆ ಅಥವಾ ರೀಡಿಂಗ್ ರೂಂ ರೋಡ್” ಎಂದು ಕರೆಯಲಾಗುತ್ತಿದೆ.

ಸ್ವಾತಂತ್ರ್ಯಾನಂತರ, ಕರ್ನಾಟಕ ಸರ್ಕಾರವು ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ ಓದಿನ ಬಗೆಗೆ ಅಭಿರುಚಿ ಮುಂತಾದವುಗಳನ್ನು ಬೆಳೆಸಲು ಉದ್ದೇಶಿಸಿ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು. ಪುರಸಭೆಯ ಆಡಳಿತದಲ್ಲಿದ್ದ ಅರಸೀಕೆರೆಯ ವಾಚನಾಲಯವು 1974 ರಲ್ಲಿ ಗ್ರಂಥಾಲಯ ಇಲಾಖೆಗೆ ಸೇರ್ಪಡೆಗೊಂಡು “ಶಾಖಾ ಗ್ರಂಥಾಲಯ” ಎಂದಾಯಿತು.

ನೂರು ವರ್ಷಗಳಷ್ಟು ಹಳೆಯದಾಗಿದ್ದ ಕಟ್ಟಡವನ್ನು 2010ನೇ ಇಸವಿಯಲ್ಲಿ ಕೆಡವಲಾಯಿತು. ಅದೇ ಸ್ಥಳದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ನೂತನವಾದ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ದಿನಾಂಕ 09-07-2016 ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ
ಮಾಡಲಾಯಿತು.

error: Content is protected !!