ಹಾಸನ: ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಭೇಟಿಯಾಗಿ ಸಂಕಷ್ಟದಲ್ಲಿರುವ ಹಾಸನ ಜಿಲ್ಲೆಯ ತೆಂಗು ಬೆಳೆಗಾರರ ನೆರವಿಗೆ ಧಾವಿಸುವಂತೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ತೆಂಗಿಗೆ ಕಪ್ಪು ತಲೆ ಹುಳು, ರುಗೋಸ್ ವೈಟ್ ಫ್ಲೈ ಕೀಟಗಳು ಮತ್ತು ಸ್ಟೆಮ್ ಬ್ಲೀಡಿಂಗ್, ಗಣೋಡರ್ಮ ವಿಲ್ಟ್ ರೋಗ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಈ ಎಲ್ಲಾ ತೊಂದರೆ ಬೆಳೆಗಾರರನ್ನು ಪಾರು ಮಾಡಬೇಕೆಂದು ಕೋರಿದರು.
ಅತಿ ತುರ್ತಾಗಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು. ಜಿಲ್ಲೆಯ ಅರಸಿಕೆರೆ, ಚನ್ನರಾಯಪಟ್ಟಣ, ಬೆಲೂರು, ಹಾಸನ ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ಹೆಚ್ಚಿಸಿ ಬೆಳೆಗಾರರಲ್ಲಿ ಅರಿವು ಮೂಡಿಸಬೇಕು.
ಅರಸಿಕೆರೆ ಮತ್ತು ಹೊಳೆನರಸೀಪುರದಲ್ಲಿ ಜೈವಿಕ ನಿಯಂತ್ರಣ ಪ್ರಯೋಗಾಲಯಗಳನ್ನು ತ್ವರಿತವಾಗಿ ಸ್ಥಾಪಿಸಬೇಕು. ಬೆಳೆಗಾರರಿಗೆ ತೆಂಗು ಅಭಿವೃದ್ಧಿ ಮಂಡಳಿ ವಿಶೇಷ ಪರಿಹಾರ ಕಲ್ಪಿಸಬೇಕು ಎಂದು ಕೋರಿದರು.










