ನವದೆಹಲಿ: ಕನ್ನಡದ ‘ಹುಡುಗರು’ ಚಿತ್ರದ ‘ಬೋರ್ಡ್ ಇಲ್ಲದ ಬಸ್’ ಸಾಂಗ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವಂತೆಯೇ ದೇಶದಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಮಾತಿಗೆ ಮತ್ತಷ್ಟು ಇಂಬು ನೀಡಿದೆ. ಪುನೀತ್ ರಾಜ್ ಕುಮಾರ್ ಕೂಡಾ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದರು.
ಫಿಟ್ ಆಗಿ ಕಾಣಬೇಕು ಎಂಬ ಮನೋಭಾವವುಳ್ಳ ಯುವ ಜನರಲ್ಲಿ ಹೃದಯಾಘಾತ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅಲ್ಲದೇ ಫಿಟ್ ನೆಸ್ , ವರ್ಕೌಟ್ ಗಳೇ ಇದಕ್ಕೆ ಕಾರಣನಾ? ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೃದಯಾಘಾತಕ್ಕೆ ಪ್ರಮುಖ ಕಾರಣಗಳು:
ಈ ಕುರಿತು ಮಾತನಾಡಿರುವ ಕೌಶಂಬಿಯ ಯಶೋಧಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ Principal Consultant ಡಾ. ಡಾ ಧೀರೇಂದ್ರ ಸಿಂಘಾನಿಯಾ, ಸ್ಟೆರಾಯ್ಡ್ ಗಳು, ನಿದ್ರೆಯ ಕೊರತೆ ಮತ್ತು ವಿಶೇಷವಾಗಿ ಮಹಿಳೆಯರಲ್ಲಿನ ಹಾರ್ಮೋನ್ ಥೆರಪಿ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದಿದ್ದಾರೆ.










