11.1 C
Munich
Home ಕ್ರೈಮ್‌ ಪ್ರಜ್ವಲ್ ರೇವಣ್ಣಗೆ ಶಿಕ್ಷೆ: ನ್ಯಾಯಕ್ಕೆ ಸಿಕ್ಕ ಜಯ, ಪ್ರಜ್ವಲ್ ನಿಂದ ಎಷ್ಟೋ ಕುಟುಂಬಗಳು ಹಾಳಾಗಿವೆ: ದೇವರಾಜೇಗೌಡ...

ಪ್ರಜ್ವಲ್ ರೇವಣ್ಣಗೆ ಶಿಕ್ಷೆ: ನ್ಯಾಯಕ್ಕೆ ಸಿಕ್ಕ ಜಯ, ಪ್ರಜ್ವಲ್ ನಿಂದ ಎಷ್ಟೋ ಕುಟುಂಬಗಳು ಹಾಳಾಗಿವೆ: ದೇವರಾಜೇಗೌಡ ವಾಗ್ದಾಳಿ

BJP leader and lawyer Devaraj Gowda said that the verdict is a testament to the strength of the judicial system, as the trial was completed within just six months.

ಹಾಸನ: ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿಯೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕೇವಲ ಆರು ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಬಲಿಷ್ಠತೆಗೆ ಈ ತೀರ್ಪು ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
“ನಾನು ಈ ದೇಶದ ನ್ಯಾಯಾಂಗ ವ್ಯವಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ಈ ತೀರ್ಪು ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಸಾಬೀತುಪಡಿಸಿದೆ. “ರೇವಣ್ಣ ಕುಟುಂಬದವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು, ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬುದು ಈಗ ಜಗಜ್ಜಾಹೀರಾಗಿದೆ. ಹಣ, ಅಧಿಕಾರದ ಬಲ ಎದುರು ನ್ಯಾಯ ಗೆದ್ದಿದೆ,” ಎಂದರು.

ಪ್ರಜ್ವಲ್ ರೇವಣ್ಣ ಅವರ ವಕೀಲರು ಸಾಕ್ಷಿಗಳನ್ನು ಕ್ರೋಡೀಕರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು. “ವಕೀಲರಿಗೆ ಸರಿಯಾದ ಮಾಹಿತಿ ನೀಡದೆ, ಸಮರ್ಥವಾಗಿ ವಾದ ಮಂಡಿಸುವಲ್ಲಿ ಎಡವಿದ್ದಾರೆ. ಆದರೆ, ನಿಜವಾದ ಸಂತ್ರಸ್ಥೆಗೆ ನ್ಯಾಯ ಸಿಕ್ಕಿದೆ,” ಎಂದರು.

ಈ ತೀರ್ಪಿನಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ಕಿದೆ ಎಂದ ದೇವರಾಜೇಗೌಡ, “ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದರೆ ಭಾವುಕರಾಗಬಾರದು. ಅವರಿಂದ ಎಷ್ಟೋ ಹೆಣ್ಣುಮಕ್ಕಳ ಜೀವನ, ಕುಟುಂಬಗಳು ಹಾಳಾಗಿವೆ. ರೇವಣ್ಣ ಕುಟುಂಬದವರು ನಂಬಿಕೆಗೆ ಅನರ್ಹರು,” ಎಂದು ಕಿಡಿಕಾರಿದರು.

ನ್ಯಾಯಾಲಯದ ತೀರ್ಪಿನ ಪ್ರಕಾರ, ಪ್ರಜ್ವಲ್ ರೇವಣ್ಣಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆಯಾಗಬಹುದು. “ಕಾಲವಿಳಂಬವಾದರೆ ಅಪರಾಧಿಗಳು ತಪ್ಪಿಸಿಕೊಳ್ಳಲು ದಾರಿ ಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲಾಗಿದೆ,” ಎಂದು ದೇವರಾಜೇಗೌಡ ಹೇಳಿದರು.

“ಕಾನೂನಿನ ಮುಂದೆ ಎಲ್ಲರೂ ಸಮಾನ. ಈ ತೀರ್ಪು ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶವಾಗಿದೆ,” ಎಂದರು.

error: Content is protected !!