14.2 C
Munich
Home ಕ್ರೈಮ್‌ ಹೊರ ರಾಜ್ಯದ ಕಾರ್ಮಿಕರಿಂದ ಗಾಂಜಾ ಮಾರಾಟ ಯತ್ನ ಪೋಲೀಸರಿಂದ ಇಬ್ಬರ ಬಂಧನ: ಸಕಲೇಶಪುರ ಗ್ರಾಮಾಂತರ ಪೊಲೀಸರ...

ಹೊರ ರಾಜ್ಯದ ಕಾರ್ಮಿಕರಿಂದ ಗಾಂಜಾ ಮಾರಾಟ ಯತ್ನ ಪೋಲೀಸರಿಂದ ಇಬ್ಬರ ಬಂಧನ: ಸಕಲೇಶಪುರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ

Sakleshpur: An incident occurred in Ballupete where two workers who had come from out of state for wage work were trying to sell ganja

ಸಕಲೇಶಪುರ: ಕೂಲಿ ಕೆಲಸಕ್ಕೆ ಎಂದು ಹೊರ ರಾಜ್ಯದಿಂದ ಬಂದ ಕಾರ್ಮಿಕರಿಬ್ಬರೂ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಘಟನೆ ಬಾಳ್ಳುಪೇಟೆಯಲ್ಲಿ ನೆಡೆದಿದೆ.

ತಾಲೂಕಿನ ಬಾಳ್ಳುಪೇಟೆಯಿಂದ ಜಮ್ಮನಹಳ್ಳಿ, ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಹೊಂಚು ಹಾಕುತ್ತಿದ್ದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೇಯಂಡಣೆ ಗ್ರಾಮದ ದಯಾ ರವರ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆಂದು ಅಸ್ಸಾಂ ರಾಜ್ಯದಿಂದ ಬಂದಿದ್ದ ಸಂಶುಲ್ ಹಕ್ ಬಿನ್ ಮತಬ್ ಉದ್ದೀನ್( 27) ಮತ್ತು ಹುರುಮುಜ್ ಆಲಿ ಬಿನ್ ಜಾಮರ್ ಉದ್ದೀನ್ ( 26) ಬಂದಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಸುಮಾರು 36,000 ಸಾವಿರ ಬೆಲೆ ಬಾಳುವ 2.00 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆಗಾಗಿ, ಎಸ್ಪಿ ಮೊಹಮದ್ ಸುಜಿತಾ ಹಾಗೂ  ಎಎಸ್ಪಿ ತಮ್ಮಯ್ಯ, ವೆಂಕಟೇಶ ನಾಯ್ಡು, ಡಿವೈಎಸ್ಪಿ ಪ್ರಮೋಧಕುಮಾರ ಮಾರ್ಗದರ್ಶನದಲ್ಲಿ ನಿರಂಜನ್ ಸಿಪಿಐ, ಸಕಲೇಶಪುರ ಗ್ರಾಮಾಂತರ ವೃತ್ತ ರವರ ಸಾರಥ್ಯದಲ್ಲಿ ತಂಡವನ್ನು ರಚಿಸಿ ಗಾಂಜಾ ಆರೋಪಿಗಳ ಪತ್ತೆಗಾಗಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ, ಪ್ರಸನ್ನ ಅವರ ನೇತೃತ್ವದಲ್ಲಿ ಗುಪ್ತಮಾಹಿತಿ ಸಿಬ್ಬಂದಿಯಾದ ಖಾದರ್ ಆಲಿ ಸೇರಿದಂತೆ ಸಿಬ್ಬಂದಿಗಳಾದ ಆದಿತ್ಯ,ಶಶಾಂಕ್,ಚೇತನ್, ರಘು ಶರತ್ ಹಾಗೂ ಜೀಪಿನ ಚಾಲಕರಾದ ಯೋಗೇಶ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

error: Content is protected !!