14.6 C
Munich
Home ಕ್ರೈಮ್‌ ಪ್ಲೈವುಡ್ ತುಂಬಿದ್ದ ಲಾರಿ ಪಲ್ಟಿ: ಕ್ಲೀನರ್ ಸ್ಥಳದಲ್ಲೆ ಸಾವು

ಪ್ಲೈವುಡ್ ತುಂಬಿದ್ದ ಲಾರಿ ಪಲ್ಟಿ: ಕ್ಲೀನರ್ ಸ್ಥಳದಲ್ಲೆ ಸಾವು

ಹಾಸನ, ಮಾರ್ಚ್ 25: ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಎನ್.ಎಚ್.75 ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಪ್ಲೈವುಡ್ ತುಂಬಿದ ಲಾರಿಯೊಂದು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಲಾರಿಯ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತ ದುರ್ದೈವಿಯನ್ನು ಮಂಗಳೂರು ಜಿಲ್ಲೆಯ ಬಣತಾಡಿ ಗ್ರಾಮದ ಉಮ್ಮರ್ ಸಲ್ಮನ್ ಫಾರಿಶ್ (18) ಎಂದು ಗುರುತಿಸಲಾಗಿದೆ. ಈ ಘಟನೆ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾರಿಯು ಅತಿ ವೇಗದಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಈ ವೇಳೆ ಲಾರಿಯ ಕ್ಲೀನರ್ ಆಗಿದ್ದ ಉಮ್ಮರ್ ಸಲ್ಮನ್ ಫಾರಿಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!