20.1 C
Munich
Home ಜಿಲ್ಲೆ ಮನೆದೇವರ ಸನ್ನಿಧಿಯಲ್ಲಿ ಜಾರಿಬಿದ್ದ ಎಚ್.ಡಿ.ರೇವಣ್ಣ: ಏಕಾದಶಿ ಉಪವಾಸದಿಂದ ನಿತ್ರಾಣಗೊಂಡ ಮಾಜಿ ಸಚಿವ?

ಮನೆದೇವರ ಸನ್ನಿಧಿಯಲ್ಲಿ ಜಾರಿಬಿದ್ದ ಎಚ್.ಡಿ.ರೇವಣ್ಣ: ಏಕಾದಶಿ ಉಪವಾಸದಿಂದ ನಿತ್ರಾಣಗೊಂಡ ಮಾಜಿ ಸಚಿವ?

ಹಾಸನ: ಕಾಲು ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪಕ್ಕೆಲುಬಿಗೆ ಪೆಟ್ಟುಬಿದ್ದ ಘಟನೆ‌ ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಅವರ ಮನೆದೇವರು ದೇವೇಶ್ವರ ದೇವಾಲಯದಲ್ಲಿ ನಡೆದಿದೆ.

ಏಕಾದಶಿ ಪ್ರಯುಕ್ತ ಉಪವಾಸವಿದ್ದ ಎಚ್‌.ಡಿ.ರೇವಣ್ಣ, ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವ ವೇಳೆ ಜಾರಿ ಬಿದ್ದಿದ್ದಾರೆ.

ಹರದನಹಳ್ಳಿಯಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದ ಅವರ ಪಕ್ಕೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ.

ಅವರನ್ನು ಹೊಳೆನರಸೀಪುರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!