ಹಾಸನ: ಎರಡು ಅಂತಸ್ತಿನ ಮನೆ, 30 ಗುಂಟೆ ಜಮೀನಿಗಾಗಿ ತನ್ನ ಸೊಸೆ ಶಶಿಕಲಾ, ನನ್ನನ್ನು ಮನೆಯಿಂದ ಹೊರ ಹಾಕಿರುವುದಲ್ಲದೆ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆಮಾಡಲು ಯತ್ನಿಸಿದ್ದಾಳೆ. ನನಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ನಗರದ ಗುಂಡೇಗೌಡನ ಕೊಪ್ಪಲು ನಿವಾಸಿ ಚಂದ್ರಮ್ಮ ಅಳಲು ತೋಡಿಕೊಂಡರು.
ಇ ಂದು ಸುದ್ದಿಗೋಷ್ಟಿಯಲ್ಲಿ ಕಣ್ಣೀರು ಹಾಕಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ನನ್ನ ಮಗ ತೀರಿಕೊಂಡ. ಆದ ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದ ಸೊಸೆ, ಈಗ ನನಗೆ ಮನೆ ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದಾಳೆ. ಮೊದಲ ಮಹಡಿಯಿಂದ ತಳ್ಳಿ ಕೊಲೆ ಮಾಡಲೂ ಪ್ರಯತ್ನಿಸಿದ್ದಾಳೆ ಎಂದರು.
ಗು ಂಡೇಗೌಡನಕೊಪ್ಪಲು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದು, ತನಗೆ ಈಗ 70 ವರ್ಷ ವಯಸ್ಸಾಗಿದೆ. ಗಂಡ ಮೃತಪಟ್ಟ ನಂತರ ತಾವು ಮನೆಯ ಕೆಳ ಮಹಡಿಯಲ್ಲಿ ವಾಸವಾಗಿದ್ದು, ಮೊದಲ ಮಹಡಿಯಲ್ಲಿ ಪುತ್ರ ದಿನೇಶ್, ಸೊಸೆ ಶಶಿಕಲಾ ಹಾಗೂ ಮಕ್ಕಳು ವಾಸಿಸುತ್ತಿದ್ದರು.
ಕಳೆದ ಜುಲೈ 15 ಮಗ ದಿನೇಶ್ ಅನುಮಾನಾಸ್ಪದವಾಗಿ ಮೃತಪಟ್ಟ. ಅದಾದ ಬಳಿಕ ಮನೆಯ ಸಂಪೂರ್ಣ ದಾಖಲೆ ತಮ್ಮ ಹೆಸರಿನಲ್ಲಿದ್ದು, ಅದನ್ನು ತನ್ನ ಹೆಸರಿಗೆ ಮಾಡಿಕೊಡು ಎಂದು ಕಿರುಕುಳ ನೀಡುತ್ತಿದ್ದಾಳೆ.
ಆಗಸ್ಟ್ 14 ರಂದು ರಾತ್ರಿ 9 ಗಂಟೆಯಲ್ಲಿ ತಮ್ಮ ಕುತ್ತಿಗೆ ಹಿಸುಕಿ, ಮೇಲಿನಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಹೇಗೋ ತಪ್ಪಿಸಿಕೊಂಡು ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡು ರಕ್ಷಣೆ ಪಡೆದಿದ್ದಾಗಿ ಅವರು ಹೇಳಿದರು.
ಈ ಸಂಬ ಂಧ ಬೆಂಗಳೂರಿನ ಅಟ್ರಾಸಿಟಿ ಸಮಿತಿ ಸದಸ್ಯರ ಗಮನಕ್ಕೆ ವಿಷಯ ತಂದಿದ್ದೇನೆ. ಅವರು ನಾನು ಸಾಯಲು ಹೋದಾಗ ಬದುಕಿಸಿದ್ದಾರೆ. ತಮ್ಮ ಪತಿ ಸ್ವಂತ ಸಂಪಾದನೆಯಿ ಂದ ನಿರ್ಮಿಸಿದ ಮನೆಯಲ್ಲಿ ನಾನು ಉಳಿಯಲು ಅವಕಾಶ ಕಲ್ಪಿಸಬೇಕು. ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಅಟ್ರಾಸಿಟಿ ಸಮಿತಿ ಸದಸ್ಯ ಲಕ್ಷಿಪತಿ ಮಾತನಾಡಿ, ಪೊಲೀಸರಿಂದ ವೃದ್ಧೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ್ ಇದ್ದರು.












