19.4 C
Munich
Home ಮನರಂಜನೆ ಸಿನಿಮಾ ನಟನೆಯಲ್ಲಿ ಆಸಕ್ತಿ ಇದೆಯೇ? ಹಾಸನದಲ್ಲಿ ಜೂನ್ 18ರಿಂದ ರಂಗ ಅಭಿನಯ ತರಬೇತಿ ಶಿಬಿರ

ನಟನೆಯಲ್ಲಿ ಆಸಕ್ತಿ ಇದೆಯೇ? ಹಾಸನದಲ್ಲಿ ಜೂನ್ 18ರಿಂದ ರಂಗ ಅಭಿನಯ ತರಬೇತಿ ಶಿಬಿರ

ಹಾಸನದಲ್ಲಿ ಜೂನ್ 18ರಿಂದ 28ರವರೆಗೆ ನಡೆಯಲಿರುವ ರಂಗ ಅಭಿನಯ ತರಬೇತಿ ಶಿಬಿರದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರದೀಪ್ ರಂಗಾಯಣ ಹಾಗೂ ಸಂಘಟಕರು.

ಹಾಸನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂಸ್ಕೃತಿ ಟ್ರಸ್ಟ್ ವತಿಯಿಂದ ಜೂನ್ 18ರಿಂದ 28ರವರೆಗೆ ರಂಗ ಅಭಿನಯ ತರಬೇತಿ ಶಿಬಿರ ಆಯೋಜನೆ. 15ರಿಂದ 50 ವರ್ಷದವರಿಗೆ ಭಾಗವಹಿಸಲು ಅವಕಾಶ.

ಹಾಸನ, ಜೂನ್ 15(www.kannadapost.com): ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಹಾಗೂ ಸಂಸ್ಕೃತಿ ಟ್ರಸ್ಟ್ (ರಿ) ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ರಂಗ ಅಭಿನಯ ತರಬೇತಿ ಶಿಬಿರವನ್ನು ಜೂನ್ 18ರಿಂದ 28ರವರೆಗೆ ಆಯೋಜಿಸಲಾಗಿದೆ ಎಂದು ಪ್ರದೀಪ್ ರಂಗಾಯಣ ಅವರು ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ 15ರಿಂದ 50 ವರ್ಷ ವಯೋಮಾನದ ನಟನೆಯಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವರ್ಗದವರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.

ಶಿಬಿರದಲ್ಲಿ ರಂಗಾಯಣ ಹಾಗೂ ನೀನಾಸಂನಲ್ಲಿ ತರಬೇತಿ ಪಡೆದ ನುರಿತ ರಂಗಕರ್ಮಿಗಳು ಅಭಿನಯದ ವಿವಿಧ ಆಯಾಮಗಳ ಕುರಿತು ತರಬೇತಿ ನೀಡಲಿದ್ದಾರೆ. ಆಂಗಿಕ ಅಭಿನಯ, ವಾಚಿಕ ಅಭಿನಯ, ಸಾತ್ವಿಕ ಅಭಿನಯ, ಧ್ವನಿ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳ ಕುರಿತ ಪ್ರಾಯೋಗಿಕ ತರಬೇತಿ ಶಿಬಿರದ ಪ್ರಮುಖ ಆಕರ್ಷಣೆಯಾಗಲಿದೆ.

ಮೈಸೂರು ರಂಗಾಯಣದಲ್ಲಿ ರಂಗ ಶಿಕ್ಷಣ ಪಡೆದು ಹಲವು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರದೀಪ್ ರಂಗಾಯಣ ಅವರು ಶಿಬಿರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿಬಿರದಲ್ಲಿ ಕೇವಲ 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಾಯಿಸಿಕೊಳ್ಳುವವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಬಿರದ ನಿರ್ದೇಶಕ ಪ್ರದೀಪ್ ರಂಗಾಯಣ ಅವರನ್ನು ಮೊಬೈಲ್ ಸಂಖ್ಯೆ 7676443338ರಲ್ಲಿ ಸಂಪರ್ಕಿಸಬಹುದಾಗಿದೆ.

ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಬೊಮ್ಮೇಗೌಡ, ಪ್ರದೀಪ್ ರಂಗಾಯಣ, ಮಧುಸೂದನ್, ಶಂಕರ್, ಮಮತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!