ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಯೋಗಕ್ಷೇಮ ಮೀಡಿಯಾ ಪ್ರೈವೇಟ್ ಲಿಮಿಟೆಡ್, ವಿಶ್ವಂ ಟಿವಿ ವತಿಯಿಂದ ನೀಡಿದ ಗಾಂಧಿ ಪುರಸ್ಕಾರವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರಿಗೆ ಶಕ್ತಿ ಭವನದಲ್ಲಿ ಪ್ರದಾನ ಮಾಡಲಾಯಿತು.
ನಸುಕಿನ ನೊಗ ನಾಟಕ ಪ್ರದರ್ಶನಕ್ಕೆ ಕಾರಣಾಂತರದಿಂದ ಕೆವಿಪಿ ಅವರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಪ್ರಶಸ್ತಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಂಭುಲಿಂಗ, ಯೋಗಕ್ಷೇಮ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕರಾದ ಡಾ.ಎಸ್ ಎಲ್ ಎನ್ ಸ್ವಾಮಿ ಅವರುಗಳು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಂಡ್ಯ ರವಿ, ಶ್ರೀವತ್ಸ ಕೆ ಎಸ್ ಹಾಗೂ ಪ್ರತಿನಿಧಿ ಪತ್ರಿಕೆ ಸಂಪಾದಕರಾದ ಸಿ.ಕೆ ಮಹೇಂದ್ರ, ಧರ್ಮಪುರಾ ನಾರಾಯಣ, ಜಗದೀಶ್ ಉಪಸ್ಥಿತರಿದ್ದರು.
Gandhi Award, presented by the Karnataka State Newspaper Distributors Association, Yogakshema Media Private Limited, and Vishwam TV, was presented to the Chief Minister’s Media Advisor, K.V. Prabhakar, at Shakti Bhavan.










