ಹಾಸನ: ಸಕಲೇಶಪುರ ಉಪವಿಭಾಗದ ಸಹಕಾರ ಸಂಘ ಕಾರ್ಯದರ್ಶಿಗಳಿಗೆ ಯಶಸ್ವಿನಿ ಯೋಜನೆ ತರಬೇತಿ

one-day special training camp on the Yashaswini Health Insurance Scheme was held today under the auspices of Hassan District Cooperative Union and the Cooperative Department for the secretaries of Sakleshpur Sub-Division Primary Agricultural Cooperative Societies and Milk Producers Cooperative Societies.

ಹಾಸನ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಸಕಲೇಶಪುರ ಉಪವಿಭಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಕುರಿತು ತರಬೇತಿ ಒಂದು ದಿನದ ವಿಶೇಷ ತರಬೇತಿ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಹಿರಿಯ ನಿರ್ದೇಶಕ ಹಾಗೂ ಸಹಕಾರ ರತ್ನ ಪುರಸ್ಕೃತ ಆರ್.ಟಿ. ದ್ಯಾವೇಗೌಡ, ಸಹಕಾರ ಸಂಘಗಳಲ್ಲಿ ಸಿಇಓ ಅಥವಾ ಕಾರ್ಯದರ್ಶಿಗಳ ಪಾತ್ರ ಮುಖ್ಯವಾಗಿದ್ದು ಸರ್ಕಾರದಿಂದ ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ರೈತರಿಗೆ ತುಂಬ ಉಪಯುಕ್ತವಾಗಿದೆ. ಕಾರಣ ಈ ಯೋಜನೆಯನ್ನು ರೈತರು ಮತ್ತು ಸಹಕಾರಿಗಳಿಗೆ ತಲುಪಿಸುವುದು ಅತಿ ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಪ್ರಕಾಶ್‌ ಮಾತನಾಡುತ್ತಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಪಟ್ಟಣ ಮತ್ತು ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಸಂಬಂದಿಸಿದಂತೆ ಇಂದಿನ ತರಬೇತಿಯಲ್ಲಿ ಉಪನ್ಯಾಸಕರುಗಳು ನೀಡುವ ಮಾಹಿತಿಯಂತೆ ಆನ್ ಲೈನ್ ಮೂಲಕ ಹೆಚ್ಚಿನ ಸದಸ್ಯರನ್ನು ನೊಂದಣಿ ಮಾಡಿಸುವುದು ಅದರೊಂದಿಗೆ ಹೆಚ್ಚಿನ ಸಂಖ್ಯೆಯ ಸಹಕಾರಿಗಳು, ರೈತರು ಈ ಯೋಜನೆಯ ಪ್ರಯೋಜನ ಪಡೆದು ಕೊಳ್ಳಲು ಸಹಕರಿಸಿಬೇಕೆಂದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಗಣೇಶ್, ಸಿದ್ದೇಶ್‌, ಪ್ರವೀಣ್‌ ಮತ್ತು ಹೆಚ್‌ಡಿಸಿಸಿ ಬ್ಯಾಂಕಿನ ಎಲ್ಲಾ ಕ್ಷೇತ್ರಧಿಕಾರಿಗಳು ಮತ್ತು ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು.