ನುಗ್ಗೇಹಳ್ಳಿ : ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಾಡುಬಸವೇಶ್ವರ ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳ ಪುನರ್ ಜೀರ್ಣೋದ್ಧಾರಕ್ಕೆ ಎಲ್ಲರ ಸಹಕಾರದೊಂದಿಗೆ ಬಸವನ ಜಯಂತಿ ಎಂದು ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ನೊಣವಿನಕೆರೆ ಸೋಮನಕಟ್ಟೆ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಡಾ. ಕರಿ ವೃಷಭ ದೇಶಿ ಕೇಂದ್ರ ಶಿವ ಯೋಗೇಶ್ವರ ಮಹಾ ಸ್ವಾಮೀಜಿ ತಿಳಿಸಿದರು.
ದೇವಾಲಯದ ಜೀರ್ಣೋದ್ಧಾರದ ವಿಷಯವಾಗಿ ಶ್ರೀ ಮಠಕ್ಕೆ ಭೇಟಿ ನೀಡಿದ
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿಎನ್ ಬಾಲಕೃಷ್ಣ ಅವರ ನೇತೃತ್ವದ ನಿಯೋಗ ದೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಹಲವು ವರ್ಷಗಳಿಂದ ಶ್ರೀ ಕಾಡು ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಚನ್ನರಾಯಪಟ್ಟಣದ ಮೇಗಲಕೇರಿ ಜನತೆ ಹಾಗೂ ತಾಲೂಕಿನ ಸಮಸ್ತ ಜನತೆ ಮನವಿ ಮಾಡಿದ್ದರು ಎಲ್ಲರೊಂದಿಗೆ ಒಮ್ಮತದ ಚರ್ಚೆ ನಡೆಸಿದ ಬಳಿಕ ಪವಿತ್ರ ಪುಣ್ಯ ದಿನವಾದ ಶ್ರೀ ಬಸವ ಜಯಂತಿಯಂದು ಭೂಮಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಲ್ಲರ ಸಹಕಾರದಿಂದ ಮಾತ್ರ ದೇವಾಲಯ ಪೂರ್ಣಗೊಳ್ಳಲು ಸಾಧ್ಯ ಎಂದರು.
ಶಾಸಕ ಸಿಎನ್ ಬಾಲಕೃಷ್ಣ ಮಾತನಾಡಿ, ಪೂಜ್ಯ ಶ್ರೀಗಳು ದೇವಾಲಯ ಜೀರ್ಣೋದ್ಧಾರಕ್ಕೆ ಸಮ್ಮತಿ ಸೂಚಿಸಿದ್ದು ಕ್ಷೇತ್ರ ಶಾಸಕನಾಗಿ ಪೂಜ್ಯರ ಹಣತಿಯಂತೆ ಅವರ ದಿವ್ಯ ಸಾನಿಧ್ಯದಲ್ಲಿ ದೇವಾಲಯ ನಿರ್ಮಾಣಕ್ಕೆ ನಾವೆಲ್ಲ ಒಗ್ಗೂಡಿ ಮುಂದಾಗಬೇಕು.
ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿ ಈ ಪುರಾತನ ಶ್ರೀ ಕಾಡುಬಸವೇಶ್ವರ ಆಂಜನೇಯ ಸ್ವಾಮಿ ದೇವಾಲಯಗಳಿದ್ದು ಪುನರ್ ದೇವಾಲಯ ನಿರ್ಮಾಣದಿಂದ ಪವಿತ್ರ ಪುಣ್ಯಕ್ಷೇತ್ರವನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಮೇಗಲಕೇರಿಯ ಮಾಜಿ ಪುರಸಭಾ ಅಧ್ಯಕ್ಷ ನಾಗರಾಜ್, ರವೀಶ್ ಮತ್ತು ಉಪನ್ಯಾಸಕ ಪ್ರಕಾಶ್ ನೇತೃತ್ವದಲ್ಲಿ ಶ್ರೀಗಳಿಗೆ ಶೀಘ್ರ ದೇವಾಲಯ ನಿರ್ಮಾಣಕ್ಕೆ ಶ್ರೀಗಳು ಆಶೀರ್ವದಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ವೀರಶೈವ ಸಮಾಜದ ನವಿಲೆ ಪರಮೇಶ್, ಮಾಜಿ ಪುರಸಭಾ ಅಧ್ಯಕ್ಷ ನಾಗರಾಜ್, ರವೀಶ್, ಉಪನ್ಯಾಸಕ ಪ್ರಕಾಶ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿಗಳಾದ ಕೃಪಾ ಶಂಕರ್, ಎಂಎಸ್ ಸುರೇಶ್, ಚನ್ನರಾಯಪಟ್ಟಣದ ಮೇಗಲ ಕೇರಿ ಪ್ರಮುಖರಾದ ಯೋಗೀಶ್, ಗಣೇಶ್ ಅಣ್ಣ, ಸಿವಿ ಲೋಹಿತ್, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್, ಹಾಜರಿದ್ದರು.
Basavan Jayanti is being celebrated with the cooperation of everyone for the restoration of the legendary Sri Kadubasaveshwara Sri Anjaneya Swamy temples located in the heart of Channarayapatna.










