ಬೆಂಗಳೂರು:ಬೆಂಗಳೂರು ನಗರ ಘಟಕ ಕೆಯುಡಬ್ಲ್ಯೂಜೆ ಚುನಾವಣೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್

The court, which has given the green signal to hold the Bangalore city unit elections of the Karnataka Working Journalists' Association, has ordered the lifting of the stay on the elections.

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ, ಬೆಂಗಳೂರು ನಗರ ಘಟಕ ಚುನಾವಣೆಯನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿರುವ ನ್ಯಾಯಾಲಯ, ಚುನಾವಣೆಗೆ ನೀಡಿದ್ದ ತಡೆಯಾಜ್ಣೆ ತೆರವು ಮಾಡಿ ಆದೇಶಿಸಿದೆ.

ಒಂದು ತಿಂಗಳೊಳಗಾಗಿ ಅರ್ಜಿದಾರನ ನಾಮಪತ್ರವನ್ನು ಪರಿಗಣಿಸಿ ಚುನಾವಣೆ ನಡೆಸಲು ನ್ಯಾಯಲಯ ಸೂಚಿಸಿದೆ.

ಬೆಂಗಳೂರಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ವಾದಿಯ ನಾಮಪತ್ರವನ್ನು ಪರಿಗಣಿಸುವಂತೆ ಸೂಚಿಸಿರುವ ನ್ಯಾಯಾಲಯ, ಚುನಾವಣೆಯನ್ನು ಕ್ಯಾಲೆಂಡರ್ ಪ್ರಕಾರ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಿಳಿಸಿದೆ. ಅಲ್ಲದೆ, ವಾದಿಯು ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವವನ್ನು ವಜಾಗೊಳಿಸಿದೆ.

ನ್ಯಾಯಾಲಯ ತೀರ್ಪಿಗೆ ಸ್ವಾಗತ:

ನ್ಯಾಯಾಲಯ ನೀಡಿರುವ ತೀರ್ಪುನ್ನು ಸ್ವಾಗತಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ನಿಯಮಾವಳಿ ಪ್ರಕಾರ ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

The court, which has given the green signal to hold the Bangalore city unit elections of the Karnataka Working Journalists’ Association, has ordered the lifting of the stay on the elections.