ಬಾಗೂರು (ನುಗ್ಗೇಹಳ್ಳಿ ): ಹೋಬಳಿಯ ಎಂ ಶಿವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಜಿ.ಎಸ್. ರಮೇಶ್ ಅಧ್ಯಕ್ಷರಾಗಿ ಸರೋಜಮ್ಮ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎಂ. ಎನ್. ವೆಂಕಟರಾಮು ಉಪಾಧ್ಯಕ್ಷರಾಗಿದ್ದ ಶಂಕರಯ್ಯ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು ಇವರನ್ನು ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇದುದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿ.ಎಂ.ಪುಟ್ಟಸ್ವಾಮಿಗೌಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣರವರು ತಾಲೂಕಿನ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 300 ಕೋಟಿಗೂ ಅಧಿಕ ಸಾಲವನ್ನು ಕೊಡಿಸುವ ಮೂಲಕ ಸಹಕಾರ ಸಂಘ ಹಾಗೂ ರೈತರ ಉಳಿವಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ ಹಾಗೂ ಪ್ರಸ್ತುತ ಸಂಘದ ಮೂಲಕ ರೈತರಿಗೆ 8 ಕೋಟಿ ಸಾಲ ಕೊಡಲಾಗಿದೆ ಜೊತೆಗೆ ನಾನು ಕೂಡ ಸಹಕಾರ ಮಹಾಮಂಡಲದ ವತಿಯಿಂದ ಸಹಕಾರ ಸಂಘಗಳ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಟಿಎಪಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ನಿರ್ದೇಶಕರಾದ ಮರಗೂರು ಅನಿಲ್ ಕುಮಾರ್, ಕುಂಬಾರಹಳ್ಳಿ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಎನ್ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಮರಿ ದೇವೇಗೌಡ, ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪುರುಷೋತ್ತಮ್ ಎಸ್ ಡಿ, ಶಂಕರೇಗೌಡ ಕೆಎನ್, ರಾಮಕೃಷ್ಣ, ತಿಮ್ಮಪ್ಪ ಗೌಡ, ರವಿಕುಮಾರ್, ಜಿಎನ್ ರಮೇಶ್, ಜಯಮ್ಮ, ಕಾರ್ಯನಿರ್ವಹಣಾಧಿಕಾರಿ ಎಂ ಎನ್ ದಿನೇಶ್, ಮುಖಂಡರಾದ ರಾಮು, ಮಲಿಂಗೇಗೌಡ, ರಂಗೇಗೌಡ, ಭೂದೇಶ್, ವೈರಮುಡಿ ಗೌಡ, ಪ್ರಸನ್ನ, ಸತೀಶ್, ರಂಗಸ್ವಾಮಿ, ಮಹೇಶ್, ಇತರರಿದ್ದರು.
In the elections held on Wednesday for the posts of President and Vice President of M Shivara Primary Agricultural Cooperative Society of Bagur (Nuggehalli) Hobli, JDS-backed G.S. Ramesh was elected as the President and Sarojamma as the Vice President.










