ಸಕಲೇಶಪುರ: ಮುರುಳಿಮೋಹನ್ ವಿರುದ್ಧ ಸ್ವಪಕ್ಷೀಯರಿಂದ ಅಪಪ್ರಚಾರ ಖಂಡನೀಯ- ಅನ್ನಪೂರ್ಣ ಶ್ರೀಶೈಲ

Taluk Congress Women's Unit President Annapurna Srishaila said that the campaign being carried out by independent party leaders against the defeated Congress candidate Muralimohan is condemnable.

ಸಕಲೇಶಪುರ: ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ವಿರುದ್ದ ಸ್ವ ಪಕ್ಷೀಯ ಮುಖಂಡರೆ ಅಪಪ್ರಚಾರ ನಡೆಯುತ್ತಿರುವುದು ಖಂಡನೀಯ ಎಂದು ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಶ್ರೀಶೈಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜನವರಿ 16ರಂದು ನಡೆದ ಜನಸ್ಪಂದನ ಕಾರ್ಯಕ್ರಮವು ಹಾಸನ ಜಿಲ್ಲಾ ಮಂತ್ರಿ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಅತ್ಯಂತ ಶಿಸ್ತಿನಿಂದ ಹಾಗೂ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 11ರಿಂದ ಸಂಜೆವರೆಗೂ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆತು. ಯಾವುದೇ ಅಡಚಣೆ ಇಲ್ಲದೆ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ಸಂಜೆಯ ವೇಳೆಗೆ, ಪ್ರೋಟೋಕಾಲ್ ಹಾಗೂ ಶಿಷ್ಟಾಚಾರದಂತೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಮುರಳಿ ಮೋಹನ್ ಅವರು ಸಹ ಭಾಗವಹಿಸಿದ್ದರು. ಆದರೆ ಇದನ್ನು ಸಹಿಸದ ಸಣ್ಣಸ್ವಾಮಿ ವಿನಾಕಾರಣ ಗೊಂದಲ ಸೃಷ್ಟಿ ಮಾಡಲು ಯತ್ನಿಸಿದರು. ಆ ಸಂದರ್ಭದಲ್ಲಿ ಪರಿಸ್ಥಿತಿ ಗಂಭೀರವಾಗದಂತೆ ನೋಡಿಕೊಳ್ಳಲು ಪೊಲೀಸರು ಸಣ್ಣಸ್ವಾಮಿಯವರನ್ನು ಹೊರಗೆ ಕರೆದುಕೊಂಡು ಹೋದರು.

ಅಲ್ಲಿ ಯಾವುದೇ ಹಲ್ಲೆ ಅಥವಾ ಅಶಾಂತಿ ನಡೆದಿಲ್ಲ. ಆದರೂ ಸಣ್ಣಸ್ವಾಮಿ ಅವರು ಈ ವಿಷಯವನ್ನು ದೊಡ್ಡದಾಗಿ ಬಿಂಬಿಸಿ, ಕಾಂಗ್ರೆಸ್ ಪಕ್ಷದ ಹಾಗೂ ಮುರಳಿ ಮೋಹನ್ ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಡಿ.ಸಿ ಸಣ್ಣಸ್ವಾಮಿರವರು ಹಲವು ವರ್ಷಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಸಹ ಕ್ಷೇತ್ರದಲ್ಲಿ ಪಕ್ಷವನ್ನು ಪ್ರಬಲವಾಗಿ ಕಟ್ಟಲು ವಿಫಲರಾಗಿದ್ದಾರೆ. ಆದರೆ ಮುರುಳಿಮೋಹನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದರು ಸಹ ಕ್ಷೇತ್ರದಲ್ಲೆ ಇದ್ದು ಪಕ್ಷವನ್ನು ಸದೃಡಗೊಳಿಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರವರ ನಡೆಸಿದ ಅಧಿಕಾರಿಗಳ ಸಭೆಗೆ ಸಣ್ಣಸ್ವಾಮಿರವರಿಗೆ ಹೋಗಲು ಅವಕಾಶ ಇಲ್ಲದಿದ್ದರು ಸಹ ಸಭೆಗೆ ಹೋಗಲು ಮುಂದಾಗಿರುವುದು ಎಷ್ಟು ಸರಿ? ಅವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸದೃಡಗೊಳ್ಳುವುದು ಇಷ್ಟವಿಲ್ಲ ಎಂದರು.

ಬಾಳ್ಳುಪೇಟೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಮುರುಳಿಮೋಹನ್ ರವರು ಕ್ಷೇತ್ರದಲ್ಲಿದ್ದು ಮುಂಬರುವ ಜಿ.ಪಂ ,ತಾ.ಪಂ ಹಾಗೂ ಗ್ರಾ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಪಕ್ಷವನ್ನು ಕಟ್ಟಲು ಯತ್ನಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕೆಲವರು ಅವರ ವಿರುದ್ದ ವಿನಾಕಾರಣ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಕೌಸಲ್ಯ ಲಕ್ಷ್ಮಣಗೌಡ, ಸಾಯಿರಾಬಾನು, ಮಾಜಿ ತಾ.ಪಂ ಅಧ್ಯಕ್ಷೆ ಲೋಲಾಕ್ಷಿ, ಸುಮಂಗಲಿ, ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ಹಸೀನಾ ಹುರುಡಿ ಉಪಸ್ಥಿತರಿದ್ದರು.

Taluk Congress Women’s Unit President Annapurna Srishaila said that the campaign being carried out by independent party leaders against the defeated Congress candidate Muralimohan is condemnable.