ಹಾಸನ: ಭೀಮ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಬೃಹತ್ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಚಾಲನೆ

ಹಾಸನ: ಜ.20 ರಂದು ನಗರದಲ್ಲಿ ಅದ್ದೂರಿ ಭೀಮ ಕೋರಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ದಲಿತ ವಿಜಯೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಬೈಕ್ ಜಾಥಾದಲ್ಲಿ ನೂರಾರು ಸಂಖ್ಯೆಯ ಸಮುದಾಯದ ಮುಖಂಡರು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದರು.

ಈ ಬಗ್ಗೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಮಾತನಾಡಿ, ಜ. 20 ರಂದು ಹಾಸನದಲ್ಲಿ ಅದ್ಧೂರಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಸಮಿತಿ ಮುಂದಾಗಿದ್ದು ಮೊಟ್ಟ ಮೊದಲಬಾರಿಗೆ ಹಾಸನಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್ ಅಂಬೇಡ್ಕರ್ ಅವರ ಮೊಮ್ಮಗ ಬೀಮ್ ರಾವ್ ಅಂಬೇಡ್ಕರ್ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದರು. ಭೀಮ ಕೊರೆಗಾಂವ್ ಒಂದು ಐತಿಹಾಸಿಕ ಹೊರಾಟವಾಗಿದೆ.

ಕಡಿಮೆ ಸಂಖ್ಯೆಯ ತಳ ಸಮುದಾಯ ತಮ್ಮ ಹಕ್ಕಿಗಾಗಿ ದೊಡ್ಡ ಸಂಖ್ಯೆಯ ಬಲಾಡ್ಯರ ಜೊತೆ ಯುದ್ಧಮಾಡಿ ಜಯಗಳಿಸಿ ಐತಿಹಾಸಿಕ ಹೋರಾಟದ ವಿಜಯದ ದಿನವಾಗಿದೆ. ಇಂತಹ ಒಳ್ಳೆಯ ಕಾರ್ಯಕ್ರಮದ ಆಯೋಜನೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.