ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ದಿನೇದಿನೇ ಹೆಚ್ಚುತ್ತಿದೆ. ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ವೋಟಿಂಗ್ ಜೋರಾಗಿಯೇ ನಡೆಯುತ್ತಿದೆ.
ಸೀಸನ್ನ ಕೊನೆಯ ವೀಕೆಂಡ್ ಮುಗಿದ ನಂತರ ಸ್ಪರ್ಧಿಗಳು ಫಿನಾಲೆ ಮೂಡ್ಗೆ ಪ್ರವೇಶಿಸಿದ್ದಾರೆ. ಅಶ್ವಿನಿ ಗೌಡ, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ಧನುಷ್ ಗೌಡ ಹಾಗೂ ರಘು—ಈ ಏಳು ಮಂದಿ ಗೋಲ್ಡನ್ ವೀಕ್ಗೆ ಕಾಲಿಟ್ಟಿದ್ದಾರೆ. ಇವರಲ್ಲಿ ಆರು ಮಂದಿ ಮಾತ್ರ ಫೈನಲಿಸ್ಟ್ ಆಗಲಿದ್ದಾರೆ.
ನಿನ್ನೆ ನಡೆದ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಇನ್ನೂ ಏಳು ಸ್ಪರ್ಧಿಗಳು ಉಳಿದಿರುವುದರಿಂದ, ಮಿಡ್ವೀಕ್ನಲ್ಲಿ ಒಬ್ಬರು ಎಲಿಮಿನೇಷನ್ ಮೂಲಕ ಹೊರ ಹೋಗಲಿದ್ದಾರೆ. ಈಗಾಗಲೇ ಧನುಷ್ ಗೌಡ ಫಿನಾಲೆಗೆ ಎಂಟ್ರಿ ಪಡೆದಿರುವುದರಿಂದ ಉಳಿದ ಸ್ಪರ್ಧಿಗಳಲ್ಲಿ ಒತ್ತಡ ಹೆಚ್ಚಾಗಿದೆ.
ಇನ್ನು ನಿನ್ನೆ ರಾತ್ರಿಯಿಂದಲೇ ವೋಟಿಂಗ್ ಲೈನ್ ಓಪನ್ ಆಗಿದ್ದು, ಮಿಡ್ವೀಕ್ ಎಲಿಮಿನೇಷನ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ವೋಟಿಂಗ್ ಆರಂಭಿಸಿದ್ದಾರೆ. ಮಿಡ್ವೀಕ್ ಎಲಿಮಿನೇಷನ್ ನಂತರ ಮತ್ತೆ ವೋಟಿಂಗ್ ಲೈನ್ ತೆರೆಯಲಾಗಲಿದ್ದು, ಅದೇ ಬಿಗ್ ಬಾಸ್ ಟ್ರೋಫಿಯ ಭಾಗ್ಯವನ್ನು ನಿರ್ಧರಿಸಲಿದೆ.










