ಚನ್ನರಾಯಪಟ್ಟಣ: ಎಂಎಸ್‌ಎಂಇಗಳ ಸಾಮರ್ಥ್ಯ–ಆರ್ಥಿಕ ಗುಣಮಟ್ಟ ವೃದ್ಧಿಗೆ ರ್ಯಾಂಪ್ ಸ್ಕ್ಯಾನ್ ಕಾರ್ಯಾಗಾರ- ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್

Kasia President B.R. Ganesh Rao said that organizing such a workshop will be a key platform for MSMEs to increase their capacity and financial quality.

ಚನ್ನರಾಯಪಟ್ಟಣ: ಎಂಎಸ್ಎಂಇ ಉದ್ದಿಮೆಗಳು ತಮ್ಮ ಸಾಮರ್ಥ್ಯ ಮತ್ತು ಆರ್ಥಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರ ಆಯೋಜನೆ ಮುಖ್ಯ ವೇದಿಕೆಯಾಗಲಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶ್ ರಾವ್ ಹೇಳಿದರು.

ಪಟ್ಟಣದ ನಂದಗೋಕುಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಬೆಂಗಳೂರು ಕಾಸಿಯಾರವರ ಸಂಯುಕ್ತಾಶ್ರಯದಲ್ಲಿ ರ್ಯಾಂಪ್ ಸ್ಕ್ಯಾನ್ ಯೋಜನೆಯಡಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿ, ಸಣ್ಣ ಕೈಗಾರಿಕೆಗಳ ಸಂಕಷ್ಟಗಳ ನಿವಾರಿಸಿ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಉತ್ತಮ ಗುಣಮಟ್ಟದ ಪದಾರ್ಥಗಳ ತಯಾರಿಕೆಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

1949 ರಲ್ಲಿ ಕಾಸಿಯಾ ಸಂಘ ರಚನೆಯಾಯಿತು. 139 ಅಸೋಸೀಯೆಷನ್‌ ಗಳಿವೆ, ಅದರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಂಘಗಳು ಭಾಗಿಯಾಗಿರುತ್ತವೆ. ಹಾಗೂ ಉದ್ದಿಮೆದಾರರಿಗೆ ಸಾಕಷ್ಟು ತೊಂದರೆಗಳಿದ್ದು, ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಲಹೆ ಸೂಚನೆಗಳು ಸಿಗುತ್ತದೆ ಎಂದು ತಿಳಿಸಿದರು.

ಉದ್ದಿಮೆದಾರರಿಗೆ ಕೇವಲ ತರಬೇತಿ ಜೊತೆಯಲ್ಲಿ ಕೈಗಾರಿಕೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಕೈಗಾರಿಕೆಗಳನ್ನು ಪ್ರಾರಂಭಿಸಲು ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರದೊಂದಿಗೆ ಕೈಗಾರಿಕೆಗಳು ಅಭಿವೃದ್ದಿಯಾಗಬೇಕೆಂದು ಕರೆ ನೀಡಿದರು.

ಹಾಸನ ಜಿಕೈಕೇ ಜಿಂಟಿ ನಿರ್ದೇಶಕ ವಿ ಉಮೇಶ ಮಾತನಾಡಿ, ನಮ್ಮ ದೇಶದ ಅಭಿವೃದ್ಧಿಗೆ ಎಮ್ಮಿಸೆಮಿಗಳು ಪೂರೂವಾಗಿವೆ. ಬಿಎಸ್ಪಿ ತೆರಿಗೆ ಪಾವತಿಸುತ್ತಿವೆ. ಚನ್ನರಾಯಪಟ್ಟಣದಲ್ಲಿ ಮೊದಲ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರ್ಯಾಂಪ್ ಯೋಜನೆಯಲ್ಲಿ ಮೈಕ್ರೋ, ಸ್ಮಾಲ್ ಹಾಗೂ ಮೀಡಿಯಂ ಘಟಕಗಳಿಗೆ ಸಹಾಯಕವಾಗುವಂತೆ ಈ ಯೋಜನೆ ಅತ್ಯವಶ್ಯಕವಾಗಿದೆ. ದೇಶದ ಅಭಿವೃದ್ದಿಗೆ ಕೈಗಾರಿಕೆಗಳ ಜಿಡಿಪಿ ಕೊಡುಗೆ ಬಹಳ ಮುಖ್ಯವಾಗಿದೆ ಎಂದರು.

ಎಂ.ಎಸ್.ಎಂ.ಇ ಉದ್ದಿಮೆದಾರರು ಕೇಂದ್ರ ಸರ್ಕಾರದ ರ್ಯಾಂಪ್ ಯೋಜನೆಯಡಿಯಲ್ಲಿರುವ ಜಡ್ ಮತ್ತು ಲರ್ನ್ ಕಾರ್ಯಾಗಾರದ ಉದ್ದೇಶವನ್ನು ಸ್ಥಳೀಯ ಎಂ.ಎಸ್.ಎಂ.ಇ ಉದ್ದಿಮೆದಾರರು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರು ಮಾಡುವುದು ಹಾಗೂ ರಫ್ತು ಮಾಡುವುದರಿಂದ ತಮ್ಮ ಆರ್ಥಿಕ ಗುಣಮಟ್ಟದಲ್ಲಿ ಸಬಲರಾಗಬೇಕು ಮತ್ತು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಉದ್ದಿಮೆದಾರರಿಗೆ ಕರೆ ನೀಡಿದರು.

ಹಾಸನ ಜಿಲ್ಲಾ ಅಭಿವೃದ್ದಿ ಸಮಿತಿ ಕಾಸಿಯಾ ಹಾಸನ ಜಿಲ್ಲಾ ಪ್ಯಾನಲ್ ಅಧ್ಯಕ್ಷರ ಪ್ರಕಾಶ್ ಎಸ್.ಯಾಜಿರವರು ಮಾತನಾಡಿ, ಭಾರತ ಸರ್ಕಾರ 2047 ರಲ್ಲಿ ವಿಕಸಿತ ಭಾರತ ಆಗಬೇಕೆಂದು ಕನಸು ಕಾಣುತ್ತಿದೆ. 2ನೇ ದೊಡ್ಡ ಹಾಗೂ ಆರ್ಥಿಕ ವ್ಯವಸ್ಥೆ ಆಗಬೇಕು, ಆದರೆ ಈಗ 4ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಸಣ್ಣ ಕೈಗಾರಿಕೆಗಳಾಗಿದೆ. ಎಂ ಎಸ್ ಎಂ ಇ ಗಳು ದೇಶದ ಅಭಿವೃದ್ದಿಗೆ ಹಾಗೂ ಜಿಡಿಪಿ ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆ ಮಹತ್ವದಾಗಿದೆ ಎಂದು ತಿಳಿಸಿದರು.

ಪರಿಸರಕ್ಕೆ ಪೂರಕವಾಗಿರುವ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಸರ್ಕಾರ ಬ್ಯಾಂಕುಗಳ ಮೂಲಕ ಸಾಲ ನೀಡುವುದರ ಜೊತೆಗೆ ಸಬ್ಸಿಡಿ ನೀಡುತ್ತಿದೆ.
ಎಲ್ಲರಿಗೂ ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ತಯಾರಿಸಿ ರಫ್ತು ಮಾಡಬೇಕು ಆ ನಿಟ್ಟಲ್ಲಿ ಇಂಥ ಕಾರ್ಯಕ್ರಮಗಳು ತಾಂತ್ರಿಕ ಅಭಿವೃದ್ಧಿ ಹಾಗೂ ಇತರ ಸವಲತ್ತುಗಳನ್ನು ಉದ್ಯಮಗಳಿಗೆ ನೀಡುತ್ತಿದೆ ಎಂದರು.

ಕೆ.ಎಸ್.ಎಫ್.ಸಿ, ಹಾಸನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರವೀಂದ್ರನಾಥ್ ಮಾತನಾಡಿ, ಕೆ.ಎಸ್.ಎಫ್.ಸಿ ಸ್ಥಾಪನೆಯಾಗಿ 66 ವರ್ಷಗಳು ಕಳೆದಿವೆ. ತಮ್ಮ ಕೆ.ಎಸ್.ಎಫ್.ಸಿಯಿಂದ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.

5% ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಸಾಲ ಸೌಲಭ್ಯದ ಬಗ್ಗೆ ಮಾತನಾಡಿದರು. ಎಸ್ಸಿ ಎಸ್ಟಿ ಗಳಿಗೆ ವಿಶೇಷ ಯೋಜನೆಗಳಿದ್ದು ಅದರ ಪ್ರಯೋಜನ ಪಡೆಯಬೇಕು. ಹಾಗೂ ಇವರಿಗೆ 10 ಕೋಟಿ ಸಾಲ, 4% ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಕೈಗಾರಿಕಾ ಇಲಾಖೆಯಿಂದ ಜನರಲ್‌ ಸಬ್ಸಿಡಿ ಕನಿಷ್ಟ 10ಲಕ್ಷದವರೆಗೆ ದೊರೆಯುತ್ತದೆ ಎಂದು ತಿಳಿಸಿದರು.

ಹಾಸನ ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಮ್, ಪ್ರದಾನ ಕಾರ್ಯದರ್ಶಿ ಸುದರ್ಶನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ, ಉಪ ನಿರ್ದೇಶಕ ಕೆ.ಎಸ್ ರವಿಪ್ರಸಾದ್, ಜಿಕೈಕೇ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕಾಸಿಯಾ ಪ್ರತಿನಿಧಿ ಶ್ರೀಧರ್, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ಬಿರಾದಾರ್ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು.

Kasia President B.R. Ganesh Rao said that organizing such a workshop will be a key platform for MSMEs to increase their capacity and financial quality.