ಚನ್ನರಾಯಪಟ್ಟಣ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೀಯ: ಸಿ.ಆರ್. ಚಿದಾನಂದ್

BJP leader C.R. Chidanand said that the atrocities being committed against Hindus in Bangladesh are condemnable.

ಚನ್ನರಾಯಪಟ್ಟಣ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ಹೇಳಿದರು.

ಪಟ್ಟಣದಲ್ಲಿ ಬಂದ್ ಆಚರಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ಭಾರತ ನೀಡಿದ ಸಹಕಾರವನ್ನು ಬಾಂಗ್ಲಾ ಎಂದಿಗೂ ಮರೆಯುವಂತಿಲ್ಲ ಎಂದರು.

ಭಾರತ ದೇಶದ ಸಹಾಯ ಸಹಕಾರವನ್ನು ಮರೆತ ಬಾಂಗ್ಲಾದೇಶವು ಈ ದಿನ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ. ಈ ಕೂಡಲೇ ವಲಸಿಗರನ್ನು ಕರ್ನಾಟಕದಿಂದ ಹೊರ ಹಾಕಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.

ಅದೇ ರೀತಿ ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶ ಮಾಡಿ ಬಾಂಗ್ಲಾದಲ್ಲಿರುವ ಹಿಂದುಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

ವಿ ಎಚ್ ಬಿ ಜಿಲ್ಲಾಧ್ಯಕ್ಷ ಬೆಕ್ಕ ರಮೇಶ್, ಹಿಂದೂ ಕಮಾಂಡಸ್ ತಾಲೂಕು ಅಧ್ಯಕ್ಷ ಜಯರಾಮ್, ಮುಖಂಡರಾದ ನಂಜುಂಡ ಮೈಮ್, ದಮ್ಮನಿಂಗಲ ರವಿ, ಕೆರೆಬೀದಿ ಜಗದೀಶ್, ಆನಂದ್, ಹರ್ಷ ವರ್ಧನ್, ಇಂಡಿಯನ್ ಕ್ರಿಕೆಟರ್ಸ್ ನವೀನ್, ಮಂಜು ನಾಥ್, ಹರೀಶ್, ರೂಪೇಶ್, ಶಾಂತ ರಾಜ್, ರಾಮಣ್ಣ, ಚೇತನ್, ಅನಿಲ್, ಆನೆಕೆರೆ ವಿದ್ಯಾ ಪ್ರಸಾದ್, ಗಿರೀಶ್, ಸೇರಿದಂತೆ ಇತರರು ಹಾಜರಿದ್ದರು.

BJP leader C.R. Chidanand said that the atrocities being committed against Hindus in Bangladesh are condemnable.