ಆಲೂರು: ಸ್ಥಗಿತಗೊಂಡಿರುವ ಗಂಜಿಗೆರೆ ಏತ ನೀರಾವರಿ ಯೋಜನೆ ಶೀಘ್ರವೇ ಚಾಲನೆ – ಶಾಸಕ ಸಿಮೆಂಟ್ ಮಂಜು

Farmers who lost their land for the construction of the Hemavati reservoir were promised an alternative source of water to the land from the Ganjigere Lift Irrigation Project.

ಆಲೂರು : ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯವಾಗಿ ಗಂಜಿಗೆರೆ ಏತ ನೀರಾವರಿ ಯೋಜನೆಯಿಂದ ಭೂಮಿಗೆ ನೀರು ಹರಿಸುವ ಭರವಸೆ ನೀಡಲಾಗಿತ್ತು.

ಜನಪ್ರತಿನಿಧಿಗಳ ನಿರ್ಲಕ್ಷ್ಯ ಕ್ಕೆ ಒಂದು ಯೋಜನೆ ಎರಡೂವರೆ ದಶಕಗಳಾದರೂ ಸರಿಯಾದ ವ್ಯವಸ್ಥೆ ಇಲ್ಲದೆ ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿತ್ತು.

ಈ ಕುರಿತಂತೆ ಶಾಸಕ ಸಿಮೆಂಟ್ ಮಂಜು ಗ್ರಾಮಸ್ಥರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಬುಧವಾರ ಗಂಜಿಗೆರೆ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ  ಮಾತನಾಡಿದ ಶಾಸಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿಯ ಕೊರತೆಯಿಂದ  ಗಂಜಿಗೆರೆ ಏತ ನೀರಾವರಿ ಯೋಜನೆ  ರೈತರಿಗೆ ಸದ್ಬಳಕೆಯಾಗುವಲ್ಲಿ ಸಾಧ್ಯವಾಗಿಲ್ಲ.
ನಾನು ಇಲ್ಲಿ ಬಂದು ನೋಡಿದಾಗ ಎಲೆಕ್ಟ್ರಿಕಲ್, ಪೈಪ್ ಲೈನ್ ಹಾಗೂ ಆಯ್ದ ಭಾಗಗಳಲ್ಲಿ ಕಾಲುವೆ ಮುಚ್ಚಿ ಹೋಗಿರುವುದನ್ನು ಗಮನಿಸಿದ್ದೇನೆ. 1999 ರಲ್ಲಿ ನಿರ್ಮಾಣವಾಗಿರುವ ಗಂಜಿಗೆರೆ ಏತ ನೀರಾವರಿ ದುರಸ್ತಿಯಾಗುವುದರಿಂದ  ಅಪ್ಪಗೌಡನಹಳ್ಳಿ, ಸಿದ್ದಾಪುರ, ಗಂಜಿಗೆರೆ, ರಾಜಾಪುರ, ಬಸವನಹಳ್ಳಿ, ತಿಪ್ಪೆನಹಳ್ಳಿ, ಮಂಚೇನಹಳ್ಳಿ,ಮಂಚೇನಹಳ್ಳಿ ಕಾಲುವೆ, ಮಂದಿರ, ಗಾರಿಗಟ್ಟ ಹಳ್ಳಿಗಳ ಸುಮಾರು 900 ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ.
ಸುತ್ತ ನೀರಾವರಿ ಪ್ರದೇಶದಿಂದ ಕೂಡಿದ್ದು  ಸಮುದ್ರಕ್ಕೆ ಉಪ್ಪಿನ ಬರ ಎಂಬಂತಾಗಿದೆ. ಈ ಯೋಜನೆಯಿಂದ ನೀರು ಎತ್ತುವ ಮೋಟಾರ್ ಗಳು ಚಾಲನೆಗೊಳ್ಳದೆ  ತಾಂತ್ರಿಕ ದೋಷದಿಂದ ಕೂಡಿದ್ದು ಅಧಿಕಾರಿಗಳು ಹಣದ ಕೊರತೆಯ ನೆಪ ಹೇಳದೆ ಶೀಘ್ರವಾಗಿ ಮೋಟರ್ ರಿಪೇರಿ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಬೇರೆಡೆಗೆ ನೀರು ಒದಗಿಸಲು ಈ ಭಾಗದ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಸಕಾಲಕ್ಕೆ ನೀರು ಸಿಗದ ಕೃಷಿ ಚಟುವಟಿಕೆಗಳು ಕುಂಟಿತವಾಗಿದೆ. ಹಾಗಾಗಿ ಇಂದು ಅಧಿಕಾರಿಗಳೊಂದಿಗೆ ಪರಿಶೀಲನೆ ನೆಡೆಸಿ ಶೀಘ್ರವಾಗಿ ಸಹಿತಗೊಂಡಿರುವ ಗಂಜಿಗೆರೆ ಏತ ನೀರಾವರಿ ಯೋಜನೆಗೆ  ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಹೇಮಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ  ಇಲಾಖೆಯ  ಸಹಾಯಕ ಕಾರ್ಯ ಪಾಲಕ ಇಂಜಿನಿಯರ್  ಸಜಿತ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಸುಬ್ರಹ್ಮಣ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುದ್ರೇಗೌಡ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Farmers who lost their land for the construction of the Hemavati reservoir were promised an alternative source of water to the land from the Ganjigere Lift Irrigation Project.