ಹಾಸನ: ಹೊಸ ವರ್ಷ ಬರುತ್ತಿದ್ದು, ಹಳೆಯ ನೆನಪು, ಕೆಟ್ಟ ಘಳಿಗೆ ಮರೆತು, ಹೊಸ ಅನುಭವದೊಂದಿಗೆ ಹೊಸ ಜೀವನ ಆರಂಭಿಸೋಣ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಸಂಘದ ಡಿ.ವಿ.ಜಿ.ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಹೊಸ ಕ್ಯಾಲೆಂಡರ್ ಬಿಡುಗಡೆ ಹಾಗೂ ಏಳು ತಾಲೂಕುಗಳ ನೂತನ ಅಧ್ಯಕ್ಷರು-ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಮ್ಮ ಅನುಭನ ನೆನಪು ಮಾಡಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞತೆ ಸಲ್ಲಿಸೋಣ, ಮುಂದೆ ಹೊಸತನದೊಂದಿಗೆ ಮುನ್ನಡೆಯೋಣ, ಹೊಸ ಗುರಿ, ಉತ್ಸಾಹದೊಂದಿಗೆ ಹೆಜ್ಜೆ ಹಾಕೋಣ ಎಂದು ನುಡಿದರು.
ನಾನು ಜಿಲ್ಲೆಗೆ ಡಿಸಿಯಾಗಿ ಬಂದು ಡಿ.19ಕ್ಕೆ 6 ತಿಂಗಳು ಕಳೆದವು. ಆರಂಭದಲ್ಲಿ ಪತ್ರಕರ್ತರು ನೀಡಿದ ಸ್ವಾಗತ ಅವಿಸ್ಮರಣೀಯ. ಹಾಸನಾಂಬೆ ಉತ್ಸವ ಹೊಸ ದಾಖಲೆ ಸೃಷ್ಟಿಸಿ ಚೆನ್ನಾಗಿ ನಡೆಯಿತು. ಜಿಲ್ಲೆಗೆ 2 ಬಾರಿ ಸಿಎಂ ಬಂದು ಹೋದರು ಎಂದು ನೆನಪು ಮಾಡಿಕೊಂಡರು.
ಈ ನಡುವೆ ಮೊಸಳೆ ಹೊಸಳ್ಳಿ ದುರಂತ ಜೀವನದ ಏರಿಳಿತಕ್ಕೆ ನಿದರ್ಶನ, ಇದನ್ನು ಮೆಟ್ಟಿ ನಿಂತು ಸರಿಯಾದ ದಾರಿಯಲ್ಲಿ ಸಾಗೋದು ಜೀವನ ಎಂದರು.
ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆಗಳು, ಸೋತಿರುವವರು ಬೇಜಾರು ಮಾಡಿಕೊಳ್ಳುವುದು ಬೇಡ, ಎಲ್ಲರೂ ಒಗ್ಗೂಡಿ ಹೋಗಬೇಕಿದೆ, ಜಿಲ್ಲೆಯಲ್ಲಿ ಮಾದಕ ವ್ಯಸನ ತೀವ್ರವಾಗಿದೆ. ಬಾಲ ಗರ್ಭಿಣಿಯರೂ ಹಾಗೂ ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ನಾವೆಲ್ಲರೂ ತಡೆಯಬೇಕಿದೆ ಎಂದರು.
ಇದೇ ವೇಳೆ ರಾಷ್ಟ್ರಕವಿ ಕುವೆಂಪು ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿಶ್ವ ಮಾನವ ಸಂದೇಶ ಸಾರಿ,
ಓ ನನ್ನ ಚೇತನ ಎಂದು ಹಾಡಿ, ಬಾರಿಸು ಕನ್ನಡ ಡಿಂಡಿಮವ ಎಂದ ಕವಿಗೆ ನಾವೆಲ್ಲರೂ ನಮ ಸಲ್ಲಿಸೋಣ ಎಂದರು.
ಇದೇ ವೇಳೆ ಡಿಸಿ ಅವರು ಉತ್ತಮ ಕೆಲಸ ಮಾಡುತ್ತಿದ್ದು, ನಿಮ್ಮ ಮಾದರಿ ಕೆಲಸ ಉಳಿಯಲಿವೆ. ಟೀಕೆಗಳು ಸಾಯಲಿವೆ. ಇನ್ನೂ ಒಳ್ಳೆಯ ಕೆಲಸ ಮಾಡಿ, ನಿಮಗೆ ನಮ್ಮೆಲ್ಲರ ಬೆಂಬಲ ಸದಾ ಇರಲಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಹೆಚ್.ಬಿ.ಮದನಗೌಡ ಹೇಳಿದರು.
ಇನ್ನು ಮುಂದೆ ತಾಲೂಕು ಸಂಘಗಳೂ ಜಿಲ್ಲಾ ಸಂಘದ ಅಂಗ ಸಂಸ್ಥೆ ಆಗಲಿವೆ. ನಿಯಮ ಎಲ್ಲರಿಗೂ ಒಂದೇ ಇರಲಿದೆ. ಅದಕ್ಕಾಗಿಯೇ ಏಕ ಕಾಲಕ್ಕೆ ಚುನಾವಣೆ ನಡೆಸಲಾಗಿದೆ ಎಂದರು.
ಆರಂಭದಲ್ಲಿ ನಾವು ತಾಲೂಕು ಸಂಘಗಳಿಗೆ ಉಸ್ತುವಾರಿ ನೇಮಕ ಮಾಡಿದೆವು, ಈಗ ಅದು ರಾಜ್ಯಾದ್ಯಂತ ನಡೆಯುತ್ತಿದೆ.
ಅಧಿಕಾರ ವಿಕೇಂದ್ರೀಕರಣ ಮಾಡೋದು ನಮ್ಮ ಉದ್ದೇಶ. ಸಂಘಟನೆ ವಿಚಾರದಲ್ಲಿ ನಿರ್ಧಾರ ಮಾಡಲಾಗುವುದು. ಇದರಲ್ಲಿ ಸ್ವಾರ್ಥ ಇಲ್ಲ, ಇದರಿಂದ ನಮಗೆ ಆಗಬೇಕಾದುದು ಏನೂ ಇಲ್ಲ. ಹಗೆತನ ಇಲ್ಲ, ಸುಖಾಸುಮ್ಮನೆ ಪತ್ರಕರ್ತರ ದಾರಿ ತಪ್ಪಿಸುವ ಕೆಲಸ ಬೇಡ, ಒಳ್ಳೆಯ ವಾತಾವರಣ ಹಾಳು ಮಾಡೋದು ಬೇಡ, ಇಂತಹ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು. ಯಾರೂ ಕೂಡ ದೂರು ಬರದ ಹಾಗೆ ನಡೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಯಾರಲ್ಲೂ ವೈಯಕ್ತಿಕ ದ್ವೇಷ ಬೇಡ, ಎತ್ತಿ ಕಟ್ಟೋದು ಬೇಡ, ಯಾಕಂದ್ರೆ ಕರ್ಮ ಹಿಂದುರುಗಿ ಪೆಟ್ಟು ಕೊಡಲಿದೆ. ಶಾಂತಿಯನ್ನೇ ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಗೆದ್ದವರಿಗೆ ಅಭಿನಂದನೆಗಳು, ಸೋತವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ, ಕಾಯುವ ತಾಳ್ಮೆ ಇದ್ದರೆ ಎಲ್ಲವೂ ಆಗಲಿದೆ ಎಂದು ನುಡಿದರು.
ತಾಲೂಕು ಉತ್ತಮ ಹಾಗೂ ವಿಭಿನ್ನವಾಗಿ ಕೆಲಸ ಮಾಡಿದರೆ ಜಿಲ್ಲಾ ಸಮ್ಮೇಳನಗಳಲ್ಲಿ ಅಂಥ ಸಂಘಗಳಿಗೆ ಬಹುಮಾನ ನೀಡಲಾಗುವುದು. ಹಾಗಾಗಿ ಸಕ್ರಿಯವಾಗಿ ಕೆಲಸ ಮಾಡಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಕಾರಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್, ನಮ್ಮ ಸಂಘ ರಾಜ್ಯದಲ್ಲೇ ಉತ್ತಮ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸ ಮಾಡೋಣ ಎಂದರು.
ಹಾಗೆಯೇ ಸಹಕಾರ ಸಂಘ ಸ್ಥಾಪಿಸಲು ತೀರ್ಮಾನ ಮಾಡಲಾಗಿದೆ.
ಇದಕ್ಕಾಗಿ ಷೇರು ಸಂಗ್ರಹ ಮಾಡುವುದೇಗೆ ಎಂದು ಚರ್ಚಿಸಲಾಗಿದೆ.
ಇದರಲ್ಲಿ ಜಿಲ್ಲೆಯ ಎಲ್ಲ ಪತ್ರಕರ್ತರು ಅವರು ಕುಟುಂಬದ ಸದಸ್ಯರು ಷೇರುದಾರರಾಗಲು ಅವಕಾಶ ಇದೆ. ಕನಿಷ್ಠ 10 ಲಕ್ಷ ದುಡಿಯುವ ಬಂಡವಾಳ ಇರಬೇಕು, ಸಾಲ ಕೊಡುವ ಮಾನದಂಡ ಏನು ಎಂದು ಮುಂದೆ ಚರ್ಚೆ ಮಾಡಲಾಗುವುದು. ಜನವರಿ ಮೊದಲ ವಾರ
ಸಭೆ ಕರೆದು ಅಂತಿಮ ತೀರ್ಮಾನ ಮಾಡಲಾಗುವುದು. ಎಲ್ಲರ ಸಮಗಕಾರದಿಂದ ಉತ್ತಮ ಸಹಕಾರ ಸಂಘ ಮಾಡೋಣ ಎಂದು ಭರವಸೆ ನೀಡಿದರು.
ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ ಮಾತನಾಡಿ, ಹೊಸ ವರ್ಷದಲ್ಲಿ ನಮ್ಮ ಸಂಘ ಹೊಸ ಹೊಸ ಕನಸು ಹೊಂದಿದೆ. ಅದನ್ನು ಈಡೇರಿಸಲು ನಾವೆಲ್ಲ ಸಂಕಲ್ಪ ಮಾಡಿದ್ದೇವೆ. ಮೊದಲಿಗೆ ಪತ್ರಕರ್ತರಿಗೆ ಸಾಲ ಕೊಡುವ ಯೋಜನೆ ಶುರುವಾಗಲಿದೆ. ಶೀಘ್ರವೇ ಸಹಕಾರ ಸಂಘಕ್ಕೆ ನೋಂದಣಿ ಶುರುವಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಮುಂದಿನ
ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘಗಳನ್ನು ಸದೃಢಗೊಳಿಸಲು ಯೋಜನೆ ಇದೆ. ಸಂಘದಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದ್ದು, ಅವರವರ ಕೆಲಸ-ಕಾರ್ಯಗಳನ್ನು ಅವರು ಮಾಡುತ್ತಿದ್ದಾರೆ ಎಂದರು. ಶೀಘ್ರವೇ ಜಿಲ್ಲಾ ಸಂಘದ ಕಟ್ಟಡ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಹಾಗೆಯೇ ಕೆಲವೇ ದಿನಗಳಲ್ಲಿ ಸಂಘದಲ್ಲೇ ಪತ್ರಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ರಿಕ್ರಿಯೇಷನ್ ಕ್ಲಬ್
ಚಿಂತನೆಯೂ ಇದೆ ಎಂದರು.
ಎಲ್ಲ ತಾಲೂಕುಗಳಲ್ಲೂ ಕಟ್ಟಡ ನಿರ್ಮಾಣ ಕಾರ್ಯ ಮೊದಲಾಗಬೇಕು ಎಂದು ಸಲಹೆ ನೀಡಿದ ಅವರು, ಇಲ್ಲಿ ಸಂಘದ ಹಿತದೃಷ್ಟಿ, ಸಂಘಟನೆ ಮುಖ್ಯ. ವೈಯಕ್ತಿಕ ಸ್ವಾರ್ಥ ಇಲ್ಲ, ನಮ್ಮ ಸಂಘವನ್ನು ಮಾದರಿಯಾಗಿ ಮಾಡಬೇಕು ಎಂಬ ಇರಾದೆ ಇದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ಸೋತಿರುವವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಇದೆ. ಎಲ್ಲರೂ ಜೊತೆಯಾಗಿ ಹೋಗೋಣ ಎಂದು ನುಡಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಬಾಳ್ಳುಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಉಪಾಧ್ಯಕ್ಷ ಜಿ.ಪ್ರಕಾಶ್, ಕಾರ್ಯದರ್ಶಿಗಳಾದ ಬಿ.ಆರ್.ಬೊಮ್ಮೇಗೌಡ, ಕೆ.ಎಂ.ಹರೀಶ್, ಕುಶ್ವಂತ್, ಖಜಾಂಚಿ ಪ್ರಕಾಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿದ್ದರು.
ಚನ್ನರಾಪಟ್ಟಣದ ಹಿರಿಯ ಪತ್ರಕರ್ತ ನಾಗೇಶ್ ಪ್ರಾರ್ಥಿಸಿದರು. ಜನಮಿತ್ರ ವರದಿಗಾರರಾದ ಪುಷ್ಪಾ ಜಯರಾಂ ನಿರೂಪಣೆ ಮಾಡಿದರು. ಕಾರ್ಯದರ್ಶಿ ಹರೀಶ್ ಕೆ.ಎಂ. ಸ್ವಾಗತಿಸಿದರು.
As the new year is coming, let’s forget old memories and bad times and start a new life with new experiences, said District Collector K.S. Lathakumari.










