ಹಾಸನ: ವಿಜಯನಗರ ಬಡಾವಣೆಯ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

The people of Vijayanagara settlement, located near Thanneeruhalla in Hassan city, protested in front of the District Collector's office today and submitted a petition to the district administration demanding that various problems be resolved.The people of Vijayanagara settlement, located near Thanneeruhalla in Hassan city, protested in front of the District Collector's office today and submitted a petition to the district administration demanding that various problems be resolved.

ಹಾಸನ: ನಗರದ ತಣ್ಣೀರುಹಳ್ಳದ ಬಳಿ ಇರುವ ವಿಜಯನಗರ ಬಡಾವಣೆಯ ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬಡಾವಣೆಯ ಜನರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಮ್ಮ ಬಡಾವಣೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಇಲಾಖೆಗಳು ನಮಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಂಗಸ್ವಾಮಿ ಮಾತನಾಡಿ, ವಿಜಯನಗರ ಬಡಾವಣೆಯಲ್ಲಿ ಇರುವ ಕೆರೆ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಈವರೆಗೂ ಅಧಿಕಾರಿಗಳು ಕೆರೆ ಸ್ವಚ್ಛ ಮಾಡುವ ಗೋಜಿಗೆ ಹೋಗಿಲ್ಲ ಎಂದು ಕಿಡಿ ಕಾರಿದರು.

ಇದರಿಂದ ಕೆರೆಯಲ್ಲಿ ಹೂಳು ತುಂಬಿಕೊಂಡು ಜೊತೆಗೆ ದಟ್ಟವಾದ ಹುಲ್ಲುಗಾವಲು ಬೆಳೆದು ಕೆರೆ ಅವನತಿಯತ್ತ ಸಾಗುತ್ತಿದೆ ಎಂದು ಹೇಳಿದರು. ಕೆರೆ ಮಲೀನವಾಗಿರುವುದರಿಂದ ದುರ್ವಾಸನೆಯಿಂದ ಅಲ್ಲಿನ ಜನರಿಗೆ ರೋಗ-ರುಜಿನ ಹರಡುವ ಭೀತಿ ಎದುರಾಗಿದೆ, ಇದಲ್ಲದೆ ದನ ಕರುಗಳು ಕೂಡ ಕೆರೆಯಲ್ಲಿ ನೀರು ಕುಡಿಯಲು ಆಗುತ್ತಿಲ್ಲ, ತಮ್ಮ ಬಡಾವಣೆಯಲ್ಲಿರುವ ಏಕೈಕ ಕೆರೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಮಾತ್ರವಲ್ಲದೆ ಮಹಾನಗರ ಪಾಲಿಕೆಯ ಜವಾಬ್ದಾರಿ ಆಗಿದೆ ಇದರ ಬಗ್ಗೆ ಅಧಿಕಾರಿಗಳು ಯೋಚಿಸಬೇಕಿದೆ ಎಂದರು.

ಅಲ್ಲದೆ ಬಡಾವಣೆಯ ಪಶ್ಚಿಮ ದಿಕ್ಕಿನಲ್ಲಿ ಶುದ್ಧ ಕುಡಿಯವ ನೀರಿನ ಘಟಕವಿದ್ದು, ಇದನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಅಲ್ಲದೆ ಅದು ಸರಿಯಾದ ನಿರ್ವಹಣೆ ಇಲ್ಲದೆ ನೀರು ಕುಡಿಯಲು ಯೋಗ್ಯವಾಗಿಲ್ಲ ಜೊತೆಗೆ ಹಳ್ಳಿ ಘಟಕಕ್ಕೆ ಸುರಕ್ಷತೆಯೂ ಇಲ್ಲ. ಆದ್ದರಿಂದ ಇದನ್ನು ಅದೇ ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನದ ಎದುರುಗಡೆ ಇರುವ ಸರ್ಕಾರಿ ಶಾಲೆಗೆ ಸ್ಥಳಾಂತಸಬೇಕು ಎಂದು ಮನವಿ ಮಾಡಿದರು.

ಗುಡ್ಡೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಯಂತ್ರೋಪಕರಣ ಇಲ್ಲ. ಅಲ್ಲದೆ ಅಗತ್ಯ ವೈದ್ಯರು, ನರ್ಸ್, ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮಸ್ಥರು ಅನಾರೋಗ್ಯ ಸಂದರ್ಭದಲ್ಲಿ ತುಂಬಾ ಪರಿತಪಿಸುವಂತಾಗಿದೆ ಎಂದು ದೂರಿದರು.

ನಾಮ್‌ಕೇವಾಸ್ಥೆಗೆ ಆರೋಗ್ಯ ಕೇಂದ್ರ ಸ್ಥಾಪಿಸಿ ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಇರುವುದರಿಂದ ಇದು ಸಾರ್ವಜನಿಕರ ಬಳಕೆಗೆ ಬರುತ್ತಿಲ್ಲ. ಶೀಘ್ರವೇ ಈ ಎಲ್ಲ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ತೀವ್ರಗೊಳಿಸಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ದಸಂಸ ಹಿರಿಯ ಮುಖಂಡ ಕೃಷ್ಣ ದಾಸ್, ರಂಗಸ್ವಾಮಿ ಗುಡ್ಡೇನಹಳ್ಳಿ ಹಂದಿಜೋಗಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ.ಗೋವಿಂದರಾಜ್, ಚಂದ್ರಗುಪ್ತ ಮೌರ್ಯ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಸುರೇಶ್ ಛತ್ರನಹಳ್ಳಿ ಹಾಗೂ ಬಡಾವಣೆಯ ನಿವಾಸಿಗಳಿದ್ದರು.

The people of Vijayanagara settlement, located near Thanneeruhalla in Hassan city, protested in front of the District Collector’s office today and submitted a petition to the district administration demanding that various problems be resolved.The people of Vijayanagara settlement, located near Thanneeruhalla in Hassan city, protested in front of the District Collector’s office today and submitted a petition to the district administration demanding that various problems be resolved.