ಬೇಲೂರು: ರಾಜಕೀಯ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಿನ್ನಡೆಗೆ ಒಗ್ಗಟ್ಟಿನ ಕೊರತೆ ಕಾರಣ – ಕೆ.ಎಸ್. ಲಿಂಗೇಶ್

Former MLA K.S. Lingesh said that the Veereshaiva Lingayat community is lagging behind in the political arena in Belur Karnataka, ranking second or third.

ಬೇಲೂರು: ಕರ್ನಾಟಕದಲ್ಲಿ ವೀರೇಶೈವ ಲಿಂಗಾಯತ ಸಮುದಾಯದವರು ಎರಡು ಅಥವಾ ಮೂರನೇ ಸ್ಥಾನದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದೇವೆ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರೆಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ತಾಲೂಕು ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, 2026ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟು ಕಡಿಮೆ ಇರುವುದರಿಂದ ಹಾಗೂ ರಾಜಕೀಯವಾಗಿ ನಮ್ಮ ಕಾಲುಗಳನ್ನು ನಮ್ಮವರೆ ಎಳೆಯುವುದೆ ಕಾರಣ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜ ಬಲಾಢ್ಯವಾಗಿ ಮುಂದೆ ಬರಲು ಸಾಧ್ಯ. ಅಲ್ಲದೆ ನೌಕರರ ಕ್ಷೇಮಾಭೀವೃದ್ದಿಗೆ ನನ್ನ ಮಗನ ಹೆಸರಿನಲ್ಲಿ ೧ಲಕ್ಷ ರೂ, ನೀಡಲಾಗುವುದು. ಎಂದರು.

ಕಾಂಗ್ರೆಸ್ ಮುಖಂಡ ಗ್ರಾನೆಟ್ ರಾಜಶೇಖರ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ವೀರಶೈವ ಲಿಂಗಾಯತ ಸಮಾಜದ ವ್ಯಕ್ತಿ ಚುನಾವಣೆಗೆ ನಿಂತರೆ ಅವರನ್ನು ಗೆಲ್ಲಿಸುವುದೇ ಗುರಿಯಾಗಿರಬೇಕು. ತಾಲೂಕಿನಲ್ಲಿ 500ಕ್ಕೂ ಹೆಚ್ಚು ನೌಕರರಿದ್ದರೂ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಜನರು ಬಂದಿದ್ದಾರೆ. ಕಷ್ಟವಿದ್ದಾಗ ಮಾತ್ರ ನಾಯಕರನ್ನು ಹುಡುಕಿಕೊಂಡು ಹೋಗುವ ಹವ್ಯಾಸ ಬಿಟ್ಟು ಸಮಾಜದ ಏಳಿಗೆಗೆ ಕೆಲಸ ಮಾಡಬೇಕು. ಆಗ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷೆತೆ ವಹಿಸಿ ಮಾತನಾಡಿದ ವೀರಶೈವ ಲಿಂಗಾಯತ ಸಮಾಜದ ನೌಕರರ ಸಂಘದ ಮುಖಂಡ ಎಸ್.ಬಿ.ಪಾಲಾಕ್ಷ, ನಮ್ಮ ನೌಕರರ ಸಂಘದ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಕಾಣುವುದು ನಮ್ಮ ಉದ್ದೇಶವಾಗಿದೆ. ಕಾರಣ ಸರ್ಕಾರಿ ನೌಕರರಿಗೆ ಕಷ್ಟವಾದಾಗ ಸಮಾಜದ ಮುಖಂಡರು, ವ್ಯಕ್ತಿಗಳನ್ನು ಪರಿಚಯ ಮಾಡಿಕೊಡಲೆಂದು. ಸರ್ಕಾರಿ ನೌಕರರು ಮನಸ್ಸು ಮಾಡಿದರೆ ಯಾವ ತಂತ್ರ ಮಂತ್ರವನ್ನಾದರೂ ಉಪಯೋಗಿಸಬಹುದು, ಸರ್ಕಾರದಲ್ಲಿ ಮುಖ್ಯಮಂತ್ರಿ ಆದೇಶ ಮಾಡಿದರೆ ಅದನ್ನು ಕಾರ್ಯರೂಪಕ್ಕೆ ನೌಕರರೇ ತರಬೇಕು. ಸರ್ಕಾರ ಮತ್ತು ನೌಕರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸರ್ಕಾರದಲ್ಲಿ ಹೆಚ್ಚು ಅಧಿಕಾರಿ ಮತ್ತು ನೌಕರರಿಗೆ ಮಹತ್ವವಿರುವುದರಿಂದ ಒಗ್ಗಟ್ಟಾಗಿರಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಬಿಜ್ಜಳ ರಾಜ್ಯದ ಮಂತ್ರಿಯ ಸ್ಥಾನದಲಿದ್ದ್ಲು ಅನುಭವ ಮಂಟಪದೊಂದಿಗೆ ಕಾನೂನು, ಶಿಕ್ಷಣ ನೀಡುವಲ್ಲಿ ಬಸವಣ್ಣ ಕಾರಣ. ನಮ್ಮ ರಾಜಕೀಯ ಮುಖಂಡರಿಗೆ ನಾವು ಬೆಂಬಲ ನೀಡಿದರೆ ನಮಗೆ ಮುಂದಿನ ದಿನಗಳಲ್ಲಿ ಸರ್ಕಾರದಲ್ಲಿ ಸ್ಥಾನಮಾನಗಳು ಸಿಗುತ್ತದೆ. ಆದ್ದರಿಂದ ಸಮಾಜದವರು ಒಗ್ಗಟ್ಟಾಗಿ ಇರಬೇಕು ಎಂದರು.

ಕೇಂದ್ರ ತೆಂಗು ಬೆಳೆಗಾರರ ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ರಾಜ್ಯ ಕೈಗಾರಿಕಾ ನಿಗಮ ಮಂಡಳಿ ನಿರ್ದೇಶಕ ಗೆಂಡೇಹಳ್ಳಿ ಚೇತನ್, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ತಾಲೂಕು ಅಧ್ಯಕ್ಷ ಅಡಗೂರು ಬಸವರಾಜ್, ಮುಖಂಡರಾದ ಚೇತನ್, ವಿಂಪು ಸೇರಿದಂತೆ ಇತರರಿದ್ದರು.
ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Former MLA K.S. Lingesh said that the Veereshaiva Lingayat community is lagging behind in the political arena in Belur Karnataka, ranking second or third.