ಹಾಸನ: ಮನುಷ್ಯನ ಆರೋಗ್ಯ ಉತ್ತಮವಾಗಿರಲು ಪ್ರತಿಯೊಬ್ಬರು ದಿನ ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ರೋಟರಿ – 3182 ಜಿಲ್ಲಾ ಗೌವರನರ್ ಕೆ. ಪಾಲಾಕ್ಷ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಈಚೆಗೆ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182, ವಲಯ 9ರ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ‘ಕ್ರೀಡೋತ್ಸವ 2025’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಮನೋಭಾವ, ಸೌಹಾರ್ದತೆ ಮತ್ತು ಗೆಲ್ಲುವ ಛಲಕ್ಕೆ ಸಾಕ್ಷಿಯಾಗಿದೆ.
ಇಂತಹ ಅದ್ಧೂರಿ ಆಯೋಜನೆಯು ನಮ್ಮ ವಲಯದ ಸಾಮರ್ಥ್ಯವನ್ನು ಇಡೀ ರೋಟರಿ ಜಿಲ್ಲೆಗೆ ತೋರಿಸುತ್ತದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಿ, ಮುಂಬರುವ ಶಿವಮೊಗ್ಗದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯೂ ವಲಯ 9 ಬಹುಮಾನ ಗಳಿಸುವಂತಾಗಲಿ ಎಂದರು.
ವಲಯ 9ರ ಸಹಾಯಕ ಗೌವರನರ್ ಎ.ಜಿ. ಮಂಜುನಾಥ್ ಮಾತನಾಡಿ, ಇದು ಕೇವಲ ರೋಟರಿ ವಲಯ ಮಟ್ಟದ ಕ್ರೀಡಾಕೂಟವಾಗಿರದೆ, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿ ಆಯೋಜನೆಗೊಂಡಿದೆ. ರೋಟರಿ ಕುಟುಂಬದಲ್ಲಿ ಕ್ರೀಡಾ ಚಟುವಟಿಕೆಗಳು ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ ಎಂದರು.
ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್ ನ್ ಅಧ್ಯಕ್ಷ ಟೈಮ್ಸ್ ಗಂಗಾಧರ್ ಮಾತನಾಡಿ, “ನಾವು ಸೋಲುವುದನ್ನು ಕಲಿತಾಗಲೇ ಗೆಲುವನ್ನು ಸಂಭ್ರಮಿಸಲು ಸಾಧ್ಯ. ಮನುಷ್ಯರು ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದುಃಖ ಎಂಬುದು ಇಲ್ಲದಂತಾಗಿ, ಸಾಧನೆಯ ಕಡೆಗೆ ನಮ್ಮ ಚಿತ್ತ ಹೊರಳುತ್ತದೆ ಇದನ್ನು ಕ್ರೀಡೆಗಳು ಕಲಿಸುತ್ತವೆ .
ಹಾಗಾಗಿ ಕ್ರೀಯ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ವಲಯ 9ರ ವ್ಯಾಪ್ತಿಯಲ್ಲಿರುವ 10 ರೋಟರಿ ಕ್ಲಬ್ಗಳಿಂದ ಆಗಮಿಸಿದ್ದ ಸದಸ್ಯರು ಶಿಸ್ತುಬದ್ಧವಾದ ಪಥ ಸಂಚಲನ ನಡೆಸಿದರು. ಪ್ರತಿಯೊಂದು ಕ್ಲಬ್ನ ಸದಸ್ಯರೂ ಒಂದೇ ಬಣ್ಣದ ಟೀ ಶರ್ಟ್ ಧರಿಸಿ, ತಮ್ಮ ಕ್ಲಬ್ಗಳ ಬ್ಯಾನರ್ಗಳನ್ನು ಹಿಡಿದು ಸಾಗಿದ್ದು, ಸಮೂಹದಲ್ಲಿ ಶಿಸ್ತು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿತು.
ಈ ಪಥ ಸಂಚಲನವು ಯಾವುದೇ ದೊಡ್ಡ ಮಟ್ಟದ ಕ್ರೀಡಾಕೂಟಗಳಿಗೂ ಕಡಿಮೆ ಇರಲಿಲ್ಲ ಎಂಬಂತೆ ಕ್ರೀಡಾಸ್ಪೂರ್ತಿ ಮೆರೆಯಿತು. ಬುಲೆಟ್ ಬೈಕ್ ಮೂಲಕ ಆಕರ್ಷಕ ಸವಾರಿಯೊಂದಿಗೆ ಕ್ರೀಡಾ ಜ್ಯೋತಿಯನ್ನು ಕುಂಡಕ್ಕೆ ತಂದು ಬೆಳಗಿದ ರೀತಿ, ಅದಕ್ಕೆ ಹೊಂದಿಯಾಗುವಂತೆ ಅಲಂಕರಿಸಲಾಗಿದ್ದ ವೇದಿಕೆ ಎಲ್ಲವೂ ನೆರೆದಿದ್ದವರ ಮನ ಸೆಳೆಯಿತು.
ವಲಯ 9ರ ಜೋನ್ ಲಿಫ್ಟಿನೆಂಟ್ಗಳಾದ ಮಮತಾ ಪಾಟೀಲ್, ಶಿವ ಕುಮಾರ್, ಗಿರೀಶ್ ಅಡವಿಗೌಡ, ವಲಯ ಮಟ್ಟದ ಕ್ರೀಡಾಕೂಟದ ಸಂಯೋಜಕ ಯೋಗೀಶ್ ಎಸ್, ರೋಟರಿ ಕ್ಲಬ್ ಆಫ್ ರಾಯಲ್ ಕಾರ್ಯದರ್ಶಿ ರವಿ ಕುಮಾರ್ ಪಿ. ಖಜಾಂಚಿ ದಿಲೀಪ್ ಕುಮಾರ್ ಹಾಗೂ ಕ್ಲಬ್ನ ಎಲ್ಲಾ ಸದಸ್ಯರು ಹಾಜರಿದ್ದರು.
Rotary - 3182 District Governor K. Palaksha said that everyone should participate in sports activities on a daily basis for good human health.









