11 C
Munich
Home News ಹಾಸನ: ಡಿ.14 ರಂದು ಕೇಂದ್ರ ಸಾಹಿತ್ಯ ವೇದಿಕೆ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ

ಹಾಸನ: ಡಿ.14 ರಂದು ಕೇಂದ್ರ ಸಾಹಿತ್ಯ ವೇದಿಕೆ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ

The first Central Kannada Sahitya Sammelana of Hassan District was organized by the District Unit of the Kendra Kannada Sahitya Vedike on December 14 under the chairmanship of senior writer and folk artist Ramanna.

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ವತಿಯಿಂದ ಡಿ.14ರಂದು ಹಿರಿಯ ಸಾಹಿತಿ, ಜಾನಪದ ಕಲಾವಿದ ರಾಮಣ್ಣ ಅವರ ಸರ್ವಾಧ್ಯಕ್ಷತೆಯಲ್ಲಿ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಭಾನುವಾರ ಪರಿಷತ್ತಿನ ಮುಖ್ಯ ದ್ವಾರದಿಂದ ಸಮ್ಮೇಳನಾಧ್ಯಕ್ಷರ ಕಾಲ್ನಡಿಗೆ ಮೆರೆವಣಿಗೆ ಮೂಲಕ ಪ್ರಾರಂಭವಾಗಲಿದ್ದು, ಪ್ರಕೃತಿ ಸಮುದಾಯ ಸೇವಾ ಸಂಸ್ಥೆ ಅಶ್ವಥ್ ಹಾಗೂ ವರ್ಷಾ ಅವರು ಚಾಲನೆ ನೀಡಲಿದ್ದಾರೆ.

ಬಿ.ಟಿ.ಮಾನವ ನೇತೃತ್ವದ ಕಲಾತಂಡಗಳೊಂದಿಗೆ ಸಾಗಿ ಬುದ್ಧ ಪ್ರತಿಮೆಗೆ ಸಾಹಿತಿ ಹಾಗೂ ಪತ್ರಕರ್ತ ಮಂಜು ಬನವಾಸೆ, ಬಸವಣ್ಣ ಅವರ ಪ್ರತಿಮೆಗೆ ಬಸವ ಕೇಂದ್ರದ ಅಧ್ಯಕ್ಷ ಯು.ಎಸ್.ಬಸವರಾಜ್, ಅಂಬೇಡ್ಕರ್ ಪ್ರತಿಮೆಗೆ ಪೌರ ಕಾರ್ಮಿಕರ ಸಂಘದ ಮುಖ್ಯಸ್ಥರಾದ ನಲ್ಲಪ್ಪಣ್ಣ ಹಾಗೂ ಮಹಾಕವಿ ಕುವೆಂಪುರವರ ಪ್ರತಿಮೆಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಎ.ಟಿ.ಮಲ್ಲೇಶ್ ಕ್ರಮವಾಗಿ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸುವರು.

ನಾಡಿನ ಸುಪ್ರಸಿದ್ಧ ಜಾನಪದ ಕಲಾವಿದರಾದ ಡಾ. ಪಿಚ್ಚಳ್ಳಿ ಶ್ರೀನಿವಾಸ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಎನ್.ಶೈಲಜಾ ಹಾಸನ ಅಧ್ಯಕ್ಷತೆ ವಹಿಸುವರು, ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಸಾಹಿತಿ ಹಾಗೂ ಪತ್ರಕರ್ತ ಹೆತ್ತೂರು ನಾಗರಾಜುರವರು ಸಮ್ಮೇಳನ ಅಧ್ಯಕ್ಷರ ಕುರಿತು ಮಾತನಾಡಲಿದ್ದಾರೆ ಎಂದರು.

ಮುಖ್ಯ ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು ಮತ್ತು ಕಿರಿಯ ಅಭಿಯಂತರರಾದ ಕೆ.ಆರ್.ಕವಿತಾ ಮಹೇಂದ್ರ, ಸಮಾಜ ಸೇವಕರಾದ ಕಂಚಮಾರನಹಳ್ಳಿ ಲಕ್ಷ್ಮೀಕಾಂತ್, ಮೈಸೂರಿನ ಸುಪ್ರಸಿದ್ಧ ಗಾಯಕ ಹಾಗೂ ರಂಗಕರ್ಮಿ ಜನಾರ್ಧನ(ಜನ್ನಿ), ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಪ್ರಸಾದ್ ರಕ್ಷಿದಿ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಹಾಲಿ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ನಮ್ಮ ಹಾಸನ ವಾಹಿನಿಯ ಮುಖ್ಯಸ್ಥರಾದ ತೌಫಿಕ್ ಅಹಮದ್, ಕನ್ನಡ & ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಾರನಾಥ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನದ ಗೌರವ ಅಧ್ಯಕ್ಷರಾದ ವೈ.ಎಸ್. ರಮೇಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನದ ಅವಧಿಯಲ್ಲಿ ಜಾನಪದಕ್ಕೊಂದು ಕಾವ್ಯಗನ್ನಡಿ ಎಂಬ ಸಾಹಿತ್ಯಿಕ ಗೋಷ್ಠಿ ನಡೆಯಲಿದ್ದು ಹಾಸನದ ಪ್ರಸಿದ್ಧ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದು, ಕವಯಿತ್ರಿ ಎಚ್.ಸಿ.ಭವ್ಯನವೀನ್ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಸಿದ್ಧ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಹಂಪನಹಳ್ಳಿ ತಿಮ್ಮೇಗೌಡರು ಸಾಮಾಜಿಕ ಪರಿವರ್ತನೆಯಲ್ಲಿ ಜಾನಪದ ಎಂಬ ವಿಷಯದಡಿ ಉಪನ್ಯಾಸ ನೀಡುವರು.

ಮುಖ್ಯ ಅತಿಥಿಗಳಾಗಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ.ಲೋಕೇಶ್, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಅಧ್ಯಕ್ಷೆ ಕೆ.ಸಿ.ಗೀತಾ, ಅರಕಲಗೂಡು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಹೊಳೆನರಸೀಪುರ ಅಧ್ಯಕ್ಷೆ ಕಾವ್ಯಶ್ರೀಕೃಷ್ಣ, ಆಲೂರು ಅಧ್ಯಕ್ಷ ಕೃಷ್ಣೇಗೌಡ ಮಣಿಪುರ, ಅರಸೀಕೆರೆ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಪಂಡಿತ್, ಬೇಲೂರು ಅಧ್ಯಕ್ಷ ಮಾರುತಿ ಕೆ.ಬಿ.ದೊಡ್ಡಕೋಡಿಹಳ್ಳಿ, ಸಕಲೇಶಪುರ ಅಧ್ಯಕ್ಷೆ ಮೋಮಿನಾ ಕೆ.ಬಿ. ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ನಂತರ ನಡೆಯುವ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಯಶಂಕರ್ ಬೆಳಗುಂಬ, ಹೊ.ರಾ.ಪರಮೇಶ್., ಲಲಿತ ಎಸ್., ವಾಣಿ ಮಹೇಶ್, ಸಿಲ್ವೆಸ್ಟರ್ ಕ್ರಾಸ್ತ., ನೀಲಾವತಿ ಸಿ.ಎನ್., ಚಂದನ ಜಿ.ಆರ್., ಸ್ಫೂರ್ತಿಗೌಡ., ನವ್ಯ ಯಶವಂತ್ ಚಿಕ್ಕೋಟೆ., ಎಸ್.ಡಿ. ಪಾತರಾಜು., ಶಿವಣ್ಣ ಕೆರೆಕೋಡಿ., ಚಂದ್ರಕಲಾ ಎಂ., ರುಮಾನ ಜಬೀರ್, ಮಾಲಾ ಚೆಲುವನಹಳ್ಳಿ. ಶಿವಣ್ಣ ಎಂ. ಆಲೂರು, ಧರ್ಮ ಕೆರಲೂರು., ಎಚ್.ಬಿ. ಚೂಡಾಮಣಿ., ಎಚ್. ಯಮುನಾವತಿ, ತಾಸೀನಾ ರಜಾಕ್, ಎಚ್. ವೇದಾವತಿ ಶಿವಣ್ಣ., ಡಾ. ರಕ್ಷಾ, ದಸ್ತಗೀರ್ ನದಾಫ್., ಸುಮಪೃಥ್ವಿ ದೊರೆಸಾನಿ., ಭಾರತಿ ಎಚ್.ಎನ್.,ಮಲ್ಲೇಶ್ ಜಿ., ಡಯಾನಾ ಮಾರನಹಳ್ಳಿ., ಎಚ್.ಎಂ. ಗಿರೀಶ್. ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಸಮ್ಮೇಳನದಲ್ಲಿ ಕಂಸಾಳೆ ನೃತ್ಯದಲ್ಲಿ ವಿವಿಧ ತಂಡಗಳು ಭಾಗವಹಿಸಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಹೆತ್ತೂರು, ಮಂಜು ಬನವಾಸೆ, ಕೇಂದ್ರ ಕಸಾವೇ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಗೀತಾ, ಕಾರ್ಯದರ್ಶಿ ಸಿ.ಎನ್.ನೀಲಾವತಿ ಇದ್ದರು.

The first Central Kannada Sahitya Sammelana of Hassan District was organized by the District Unit of the Kendra Kannada Sahitya Vedike on December 14 under the chairmanship of senior writer and folk artist Ramanna.
error: Content is protected !!