4.2 C
Munich
Home News ಹಾಸನ: ಹಿಮ್ಸ್‌ನಲ್ಲಿ ರೋಗಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ

ಹಾಸನ: ಹಿಮ್ಸ್‌ನಲ್ಲಿ ರೋಗಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ

Ravish Basavapur, a member of the Governing Council of the Institute of Medical Sciences, visited the hospital and inspected the facilities available to patients under ABARC and SCST grants.

ಹಾಸನ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಆಸ್ಪತ್ರೆಗೆ ಭೇಟಿ ನೀಡಿ, ಎ.ಬಿ.ಎ.ಆರ್.ಕೆ ಹಾಗೂ ಎಸ್.ಸಿ.ಎಸ್ಟಿ ಅನುದಾನದಲ್ಲಿ ರೋಗಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಶನಿವಾರ ಹಿಮ್ಸ್ ನ ಎ.ಬಿ.ಎ.ಆರ್.ಕೆ ಹಾಗೂ ಎಸ್.ಸಿ.ಎಸ್ಟಿ ಯೋಜನೆಗಳ ಮೂಲಕ ರೋಗಿಗಳಿಗೆ ಸೌಲಭ್ಯ ಒದಗಿಸುವ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸರ್ಕಾರದ ಯೋಜನೆಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕಬೇಕು ಹಾಗೂ ಹಣ ಪಾವತಿ ಹಾಗೂ ಯೋಜನೆಗಳಿಂದ ರಿ ಕ್ಲೈಮ್ ಆದ ವೇಳೆ ಮರು ಪಾವತಿ ಹಣ ರೋಗಿಗಳಿಗೆ ಸರಿಯಾಗಿ ಹಾಗೂ ನಿಗದಿತ ಸಮಯಕ್ಕೆ ಪಾವತಿಯಾಗಬೇಕು ಎಂದರು ವಿಭಾಗದ ಮುಖ್ಯಸ್ಥರಿಗೆ ತಿಳಿಸಿದರು.

ನಂತರ ವಾರ್ಡ್ ಗಳಿಗೆ ಭೇಟಿ ನೀಡಿದ ಅವರು, ಎ.ಬಿ.ಎ.ಆರ್.ಕೆ ಹಾಗೂ ಎಸ್.ಸಿ.ಎಸ್ಟಿ ಸ್ಕೀಮ್ ಗಳ ಅಡಿಯಲ್ಲಿ ಬರುವ ರೋಗಿಗಳಿಗೆ ಅಪ್ರೂವಲ್ ನೀಡುವ ಸಲುವಾಗಿ ಓಟಿಪಿ ಗಾಗಿ ವಾರ್ಡ್ ನಿಂದ ಕೌಂಟರ್ ಗಳ ಬಳಿಗೆ ಕರೆಸಿಕೊಳ್ಳದೆ ಇರುವಂತೆ ಹಾಗೂ ರೋಗಿಗಳು ಇರುವ ಸ್ಥಳಕ್ಕೆ ಭೇಟಿ ನೀಡಿ ಓಟಿಪಿ ಪಡೆದು ಅಪ್ರೂವಲ್ ನೀಡಬೇಕು, ರೋಗಿಗಳಿಗೆ ತೊಂದರೆ ನೀಡಬಾರದು ಎಂದರು.

ಇನ್ನು ವಾರ್ಡ್ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ದಿನದಲ್ಲಿ ಒಂದು ಭಾರೀ ಮಾತ್ರ ಬಂದು ರೋಗಿಗಳನ್ನು ಪರಿಶೀಲಿಸುತ್ತಾರೆ, ಮತ್ತೆ ಏನಾದರೂ ಸಮಸ್ಯೆ ಎಂದರು ಸಹ ಬಂದು ನೋಡುವುದಿಲ್ಲ.

ಕಾಲೇಜಿನ ಪಿಜಿ ವಿದ್ಯಾರ್ಥಿಗಳೇ ನೋಡಿಕೊಳ್ಳುವ ಕೆಲಸ ಮಾಡುತ್ತಾರೆ ಹಾಗೂ ಕೆಲವು ಚಿಕಿತ್ಸೆಗೆ ಅಪ್ರೂವಲ್ ಗಳು ಸಹ ತಡವಾಗುತ್ತಿದ್ದು ರೋಗಿಗಳಿಗೆ ಸಮಸ್ಯೆಯಾಗುತ್ತಿವೆ ಎಂಬ ದೂರುಗಳೇ ಹೆಚ್ಚು ಕಂಡುಬಂದಿದ್ದು, ಈ ಬಗ್ಗೆ ಸಚಿವರು ಹಾಗೂ ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದರು.

ಇದೇವೇಳೆ ಹಿಮ್ಸ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಸೇವಾ ಭದ್ರತೆ ವಿಚಾರವಾಗಿ ಆಡಳಿತ ಪರಿಷತ್ ಸದಸ್ಯ ರವೀಶ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗ್ಯಾರಂಟಿ ಸಮಿತಿ ಸದಸ್ಯ ಅಶೋಕ್ ದೇವಿಹಳ್ಳಿ, ಯುವ ಮುಖಂಡ ಸುನಿಲ್ ಜೊತೆಯಲ್ಲಿದ್ದರು.

error: Content is protected !!