ಹಳೇಬೀಡು: ಡಿ.ವೀರೇಂದ್ರ ಹೆಗ್ಗಡೆ ಅವರ 78 ನೇ ಹುಟ್ಟಿದ ಹಬ್ಬವನ್ನು ಹಳೇಬೀಡಿನಲ್ಲಿ ವಿಶೇಷವಾಗಿ ಆಚರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೇಲೂರು ತಾಲ್ಲೂಕು ಘಟಕ ಹಾಗೂ ಹಳೇಬೀಡು ವಲಯದಿಂದ
ಪೂಜ್ಯರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದಿಂದ ಹೊಯ್ಸಳ ವೃತ್ತದವರೆಗೆ ಸ್ವಚ್ಛತೆ ನಡೆಯಿತು.ಪಿ.ಎಸ್.ಐ ಸಿದ್ದಲಿಂಗ ಬಾನಸೆ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು, ಯೋಜನೆ ಸಿಬ್ಬಂದಿ ಹಾಗೂ ಹಲವು ಗಣ್ಯರು ಕೈ ಮುಟ್ಟಿ ಕೆಲಸ ಮಾಡಿದರು. ಗ್ರಾಮ ಪಂಚಾಯಿತಿಯವರು ತ್ಯಾಜ್ಯ ಹೊರ ಸಾಗಿಸಲು ಸಹಾಯ ಮಾಡಿದರು.
ಜನಸೇವೆ ಪೂಜ್ಯ ಹೆಗ್ಗಡೆಯವರ ಕೆಲಸಗಳಲ್ಲಿ ಪ್ರಮುಖವಾಗಿದೆ. ನಿರಂತರವಾಗಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರ 78ನೇ ಹುಟ್ಟಿದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಹೇಳಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಡಿ. ಎಲ್. ಸೋಮಶೇಖರ್ ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ನಮ್ಮ ದೇಶದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಶೀತಲ ದೇವಾಲಯ ಜೀರ್ಣೋದ್ಧಾರ ಮಾಡಿ, ಧಾರ್ಮಿಕ ಕೇಂದ್ರಗಳ ಶಕ್ತಿ ಹೆಚ್ಚಿಸಿದ್ದಾರೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಬಿಜೆಪಿ ಮುಖಂಡ ಗಂಗೂರು ಶಿವಕುಮಾರ್, ಹಿರಿಯ ಮುಖಂಡ ಎಲ್ಐಸಿ ಚಂದ್ರಶೇಖರ್, ಮೇಲ್ವಿಚಾರಕರಾದ ರಜಿನಿ, ಲೀಲಾವತಿ, ಅಶ್ವಿನಿ, ಹೇಮಲತಾ, ಪಾರ್ವತಿ, ಜ್ಞಾನ ವಿಕಾಸ ಸಂಯೋಜಕಿ ಸುಶ್ಮಾ, ಲೆಕ್ಕಪರಿಶೋಧಕಿ ವಾಣಿ, ಪತ್ರಕರ್ತರಾದ ಅನಿಲ್ ಕುಮಾರ್, ರಘುನಾಥ್ ಉಪಸ್ಥಿತರಿದ್ದರು.










