ಆಲೂರು: ಅನ್ನ ಸುವಿಧಾ ಯೋಜನೆ ನವೆಂಬರ್ 1ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು, 75 ವರ್ಷ ಮೇಲ್ಪಟ್ಟ ಏಕ ಸದಸ್ಯ ಕಾರ್ಡ್‌ಗಳಿಗೆ ಈ ಯೋಜನೆ ಅನ್ವಯಗೊಳಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಆಲೂರು ತಾಲೂಕಿನಲ್ಲಿ 75 ವರ್ಷ ಮೇಲ್ಪಟ್ಟ ಏಕ ಸದಸ್ಯರಿರುವ ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯ ಲಾಗಿನಲ್ಲಿ ಅನ್ನ ಸುವಿಧಾ ಯೋಜನೆಗೆ ಒಳಪಡುವ ಅರ್ಹ ಕಾರ್ಡ್‌ಗಳನ್ನು ಸೇರಿಸಲಾಗಿದೆ. ಅವರಿಗೆ ಪಡಿತರ ನೀಡುವ ದಿನಾಂಕವನ್ನು ನಿಗದಿ ಪಡಿಸಲಾಗಿದೆ.
ಪ್ರತಿ ತಿಂಗಳು ಕೊನೆಯಲ್ಲಿ 30, 31ನೇ ದಿನಾಂಕದಂದು ಅರ್ಹ ಫಲಾನುಭವಿಗಳು ಮೊಬೈಲ್‌ಗೆ ಸಂದೇಶ ಕಳುಹಿಸಲಾಗುವುದು. ತಿಂಗಳ 1ನೇ ದಿನಾಂಕದಿಂದ 5ನೇ ದಿನಾಂಕದೊಳಗೆ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬೇಕು. ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.










