ಹಾಸನ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸಂವಿಧಾನ ಓದು ಅಭಿಯಾನ ಕರ್ನಾಟಕ ವತಿಯಿಂದ ಸಂವಿಧಾನ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಥಮ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಚಾಲಕ ರಾಜು ಗೊರೂರು ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ನ.೧೭ ರಂದು ಮಧ್ಯಾಹ್ನ ೧ ಗಂಟೆಗೆ ಗಂಧದಕೋಠಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದೆ. ನ.೧೪ ರೊಳಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಗಂಧದಕೋಠಿ ಪ್ರಾಂಶುಪಾಲರಿಗೆ ದೃಢೀಕರಣ ಪತ್ರ ಕಳಿಸಬೇಕು ಎಂದರು.
ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು-ಕರ್ತವ್ಯಗಳು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಹಿಳೆ ಮತ್ತು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದ ಮೇಲೆ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯಬೇಕು ಎಂದರು.
ಒಂದು ಕಾಲೇಜಿನಿಂದ ಐವರು ವಿದ್ಯಾರ್ಥಿಗಳು, ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಭಾಗವಹಿಸಬಹುದು. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಫ್‌ಎ, ಬಿಇ, ಎಂಬಿಬಿಎಸ್, ಬಿವಿಎಸ್‌ಸಿ, ಬಿಎಸ್‌ಸಿ ಅಗ್ರಿ, ನರ್ಸಿಂಗ್ ಹಾಗೂ ೫ ವರ್ಷಗಳ ಕಾನೂನು ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗಿಯಾಗಬಹುದು ಎಂದರು.
ವಿದ್ಯಾರ್ಥಿಗಳು ಕಾಲೇಜಿನ ಐಡಿಕಾರ್ಡ್ ತರಬೇಕು. ನಿಗದಿತ ದಿನಾಂಕ ಮತ್ತು ಸ್ಥಳಗಳಲ್ಲೇ ಪ್ರಬಂಧ ಬರೆಯಬೇಕು. ಹಾಳೆಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು. ಸಮಯ ಒಂದೂವರೆ ಗಂಟೆ ಇರಲಿದೆ. ಪ್ರಯಾಣ ಭತ್ಯೆ, ವಸತಿ ವ್ಯವಸ್ಥೆಯನ್ನು ವಿದ್ಯಾರ್ಥಿಗಳೇ ಭರಿಸಿಕೊಳ್ಳಬೇಕು ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ೧೦ ಸಾವಿರ ಪ್ರಥಮ ಬಹುಮಾನ, ೫ ಸಾವಿರ ದ್ವಿತೀಯ ಬಹುಮಾನ, ೩ ಸಾವಿರ ತೃತೀಯ ಬಹುಮಾನ ಹಾಗೂ ೧೦ ವಿದ್ಯಾರ್ಥಿಗಳಿಗೆ ೧ ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಆಸಕ್ತ ವಿದ್ಯಾರ್ಥಿಗಳು 9448427170/9980895611/9448425236 ಈ ನಂಬರಿಗೆ ಸಂಪರ್ಕಿಸಲು ಕೋರಿದರು.
ಸುದ್ದಿಗೋಷ್ಟಿಯಲ್ಲಿ ನಿವೃತ್ತ ಅಧಿಕಾರಿಗಳಾದ ಹೆಚ್.ಟಿ.ವಿಜಯ ಕುಮಾರ್, ಹುಲಿಕಲ್ ರಾಜಶೇಖರ್, ದೇವೇಗೌಡ, ಜಿ.ಟಿ.ವೆಂಕಟೇಶ್, ಜಯದೇವಯ್ಯ ಇದ್ದರು.










